
ಹೃದಯಕ್ಕೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆ ನಡೆದ ಬಳಿಕ ರಕ್ತ ತೆಳುವಾಗುವ ಬ್ಲಡ್ ಥಿನ್ನರ್ ಮಾತ್ರೆಗಳನ್ನು ರೋಗಿಗಳಿಗೆ ನಿಯಮಿತವಾಗಿ ಸೇವಿಸಲು ಕೊಡಲಾಗುತ್ತದೆ. ಆದರೆ ಇದನ್ನು ಎಷ್ಟು ವರ್ಷಗಳ ಕಾಲ ತೆಗೆದುಕೊಳ್ಳಬೇಕು ಎಂಬುದನ್ನು ವೈದ್ಯರ ಬಳಿಯೇ ಕೇಳಿ ತಿಳಿದುಕೊಳ್ಳಿ.
ಸಾಮಾನ್ಯವಾಗಿ ರಕ್ತ ಸರಾಗವಾಗಿ ಹರಿದು ಹೋಗಲೆಂದು ಬ್ಲಡ್ ಥಿನ್ನರ್ ಮಾತ್ರೆಗಳನ್ನು ನೀಡುತ್ತಾರೆ. ವೈದ್ಯರ ಅನುಮತಿ ಇಲ್ಲದೆ ಈ ಮಾತ್ರೆಗಳನ್ನು ಸೇವಿಸುವುದು ತಪ್ಪು. ಇದರ ಸೇವನೆ ವೇಳೆ ದೇಹದಲ್ಲಿ ಎಲ್ಲಾದರೂ ಗಾಯಗಳಾದರೆ ವಿಪರೀತ ರಕ್ತಸ್ರಾವವಾಗಬಹುದು.
ಅಂಥ ಸಂದರ್ಭದಲ್ಲಿ ತಕ್ಷಣ ವೈದ್ಯರ ಬಳಿ ತೆರಳಬೇಕು, ಹಾಗೂ ಈ ಮಾತ್ರೆಗಳನ್ನು ಸೇವಿಸುತ್ತಿರುವುದರ ಬಗ್ಗೆ ವಿವರಣೆ ನೀಡಬೇಕು. ಆಗ ಮಾತ್ರ ವೈದ್ಯರಿಗೆ ವಿಪರೀತ ಸ್ರಾವದ ಕಾರಣ ತಿಳಿಯಲು ಸಾಧ್ಯ.
ಇದನ್ನು ಅನಿಯಮಿತವಾಗಿ ಸೇವಿಸುವುದರಿಂದ ಜಠರದಲ್ಲಿ ಅಥವಾ ಮೆದುಳಿನಲ್ಲಿ ರಕ್ತಸ್ರಾವವಾಗಬಹುದು. ಇದು ಮಾರಣಾಂತಿಕವಾಗಿಯೂ ಪರಿಣಮಿಸಬಲ್ಲದು.
ಈ ಮಾತ್ರೆಗಳನ್ನು ಸೇವಿಸುವ ವೇಳೆ ಅನಿರೀಕ್ಷಿತ ರಕ್ತಸ್ರಾವವಾದರೆ, ಕಪ್ಪು ಮಲ ವಿಸರ್ಜನೆಯಾದರೆ ಮತ್ತು ಪಾರ್ಶ್ವವಾಯುವಿನ ಲಕ್ಷಣಗಳು ಕಂಡುಬಂದರೆ ಮಾತ್ರೆ ತಿನ್ನುವುದನ್ನು ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹಾಗಾಗಿ ಈ ಮಾತ್ರೆ ಎಷ್ಟು ಸಮಯದತನಕ ತೆಗೆದುಕೊಳ್ಳಬೇಕು ಎಂಬುದನ್ನು ಕಡ್ಡಾಯವಾಗಿ ವೈದ್ಯರ ಬಳಿ ಕೇಳಿಯೇ ತಿಳಿದುಕೊಳ್ಳಿ.