ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿಯಿಂದ ತೂಕ ಇಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿದೆ. ತೂಕ ಇಳಿಸಿಕೊಳ್ಳಲು ಜನರು ಹರಸಾಹಸ ಮಾಡುತ್ತಾರೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಕೆಲವು ಪಾನೀಯಗಳನ್ನು ಸೇವಿಸುವುದರಿಂದ ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು.
*ಮೆಂತ್ಯ ನೀರು : ಮಲಗುವ ಮುನ್ನ ಪ್ರತಿದಿನ ರಾತ್ರಿ ಮೆಂತ್ಯಕಾಳನ್ನು ನೆನೆಸಿದ ನೀರನ್ನು ಕುಡಿಯಿರಿ. ಇದು ದೇಹದಲ್ಲಿ ಕೊಬ್ಬಿನ ರಚನೆಯನ್ನು ತಡೆಯುತ್ತದೆ. ಅಲ್ಲದೇ ದೆಹದಲ್ಲಿರುವ ವಿಷ ಪದಾರ್ಥಗಳನ್ನು ಹೊರಹಾಕುತ್ತದೆ.
*ಅಲೋವೆರಾ ಜ್ಯೂಸ್ : ರಾತ್ರಿ ಮಲಗುವ ಮುನ್ನ ಅಲೋವೆರಾ ಸಸ್ಯದ ಎಲೆಗಳಲ್ಲಿರುವ ಅದರ ಲೋಳೆಯನ್ನು ತೆಗೆದು ನೀರಿನಲ್ಲಿ ಬೆರೆಸಿ ಕುಡಿಯಿರಿ. ಇದು ಕೂಡ ದೇಹದಲ್ಲಿ ಸಂಗ್ರಹವಾಗುವ ಕೊಬ್ಬನ್ನು ಕರಗಿಸುತ್ತದೆ.
*ಅರಿಶಿನ ಹಾಲು : ವೈರಲ್ ಸೋಂಕನ್ನು ನಿವಾರಿಸಲು ಅರಿಶಿನ ಹಾಲನ್ನು ಸೇವಿಸುತ್ತಾರೆ. ಆದರೆ ಇದು ತೂಕವನ್ನು ಇಳಿಸಿಕೊಳ್ಳಲು ಕೂಡ ಸಹಕಾರಿ. ರಾತ್ರಿ ಮಲಗುವಾಗ ಅರಿಶಿನ ಹಾಲನ್ನು ಸೇವಿಸಿದರೆ ಅದು ದೇಹದಲ್ಲಿರುವ ಅನಗತ್ಯ ಅಂಶಗಳನ್ನು ಹೊರಹಾಕುತ್ತದೆ.