ತುಳಸಿ ಬಳಸಿ ನಿಮ್ಮ ಸೌಂದರ್ಯ ಸಮಸ್ಯೆ ನಿವಾರಿಸಿಕೊಳ್ಳಿ

ತುಳಸಿ ಆರೋಗ್ಯ ಮತ್ತು ಸೌಂದರ್ಯಕ್ಕೆ ಬಹಳ ಉಪಯೋಗಕಾರಿ ಮನೆಮದ್ದು. ಇದನ್ನು ಪ್ರತಿದಿನ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ ಇದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು. ಅಂತಹ ಕೆಲವು ಮನೆಮದ್ದುಗಳು ಇಲ್ಲಿವೆ ನೋಡಿ.

*1 ಚಮಚ ಹಾಲಿನ ಕೆನೆಗೆ 1 ಚಮಚ ತುಳಸಿ ಪೇಸ್ಟ್ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತದೆ.

*ತುಳಸಿ ಪೇಸ್ಟ್ ಗೆ 1 ಚಮಚ ಮೊಸರು ಸೇರಿಸಿ ರಾತ್ರಿಯಿಡಿ ನೆನೆಸಿಟ್ಟು ಬೆಳಿಗ್ಗೆ ದಾಲ್ಚಿನ್ನಿ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ 5 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.

*ತುಳಸಿ ಪೇಸ್ಟ್ ಗೆ 1 ಚಿಟಿಕೆ ಅರಿಶಿನ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ಕ್ಲೀನ್ ಮಾಡಿ. ಇದರಿಂದ ಮುಖದ ಮೇಲಿನ ಸುಕ್ಕುಗಳು ನಿವಾರಣೆಯಾಗುತ್ತದೆ.

*1 ಚಮಚ ತುಳಸಿ ಪೇಸ್ಟ್ ಗೆ 1 ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ. ಇದು ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read