ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿಲ್ಲವಾದರೆ ಅದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಎದುರಾಗಲು ಮುಖ್ಯ ಕಾರಣ ಮಸಾಲೆಯುಕ್ತ ಆಹಾರ, ಕೊಬ್ಬಿನ ಆಹಾರ, ಜಿಡ್ಡಿನ ಆಹಾರಗಳ ಸೇವನೆ. ಈ ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಈ 7 ವಿಧಾನಗಳ ಬಗ್ಗೆ ತಿಳಿದುಕೊಳ್ಳಿ.
*ಕೊಬ್ಬಿನ ಆಹಾರದ ಸೇವನೆಯನ್ನು ಕಡಿಮೆ ಮಾಡಿ. ಇದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಕಾಡುತ್ತದೆ.
*ಹೆಚ್ಚು ನೀರನ್ನು ಸೇವಿಸಿ. ಇದರಿಂದ ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಹಾಗಾಗಿ ದಿನಕ್ಕೆ 8 ಗ್ಲಾಸ್ ನೀರನ್ನು ಸೇವಿಸಿ.
*ಉತ್ತಮ ಬ್ಯಾಕ್ಟೀರಿಯಾಗಳು ದೇಹದಲ್ಲಿ ಕಡಿಮೆಯಾದಾಗ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತದೆ. ಹಾಗಾಗಿ ಜೀರ್ಣಕ್ರಿಯೆ ಉತ್ತಮವಾಗಲು ಮೊಸರಿನಂತಹ ಒಳ್ಳೆ ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಕಾರಣವಾಗುವಂತಹ ಆಹಾರವನ್ನು ಸೇವಿಸಿ.
*ಧೂಮಪಾನ ಮತ್ತು ಮದ್ಯಪಾನಗಳನ್ನು ಮಾಡಬೇಡಿ. ಇದು ಮೂತ್ರ, ಶ್ವಾಸಕೋಶಗಳನ್ನು ನಾಶಮಾಡುವುದಲ್ಲದೇ ಜೀರ್ಣಕ್ರಿಯೆಯ ಮೇಲೂ ಪ್ರಭಾವ ಬೀರುತ್ತದೆ. ಮತ್ತು ಆಲ್ಕೋಹಾಲ್ ನಿಂದ ಜೀರ್ಣ ಕ್ರಿಯೆಯ ಮೇಲೆ ಹೆಚ್ಚಿನ ಹಾನಿಯಾಗುತ್ತದೆ.
*ಪ್ರತಿದಿನ ಯೋಗ ಮತ್ತು ವ್ಯಾಯಾಮವನ್ನು ಅಭ್ಯಾಸ ಮಾಡಿ. ಇದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ. ಅಜೀರ್ಣ ಸಮಸ್ಯೆ ದೂರವಾಗುತ್ತದೆ.