ಬೆಳಿಗ್ಗೆ ಎದ್ದಾಗ ಕೆಲವರ ಮುಖ ಊದಿಕೊಂಡಿರುತ್ತದೆ. ಒತ್ತಡದ ಕಾರಣ ನಿದ್ದೆ ಸರಿಯಾಗಿ ಬರದಿದ್ದಾಗ ಈ ರೀತಿಯಾಗುತ್ತದೆ. ಇದರಿಂದ ತುಂಬಾ ಮುಜುಗರಕ್ಕೊಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಈ ಮಾರ್ಗಗಳನ್ನು ಅನುಸರಿಸಿ.
*ನಿರ್ಜಲೀಕರಣದಿಂದ ಈ ಸಮಸ್ಯೆ ಕಾಡುತ್ತದೆ. ದೇಹದ ಜೀವಕೋಶಗಳು ಮತ್ತು ಅಂಗಾಂಶಗಳು ನೀರನ್ನು ಹೀರಿಕೊಂಡು ಹಿಡಿದಿಟ್ಟುಕೊಳ್ಳುತ್ತದೆ. ಇದು ಮುಖದ ಊತಗಳಿಗೆ ಕಾರಣವಾಗುತ್ತದೆ. ಸರಿಯಾಗಿ ನೀರನ್ನು ಸೇವಿಸಿದರೆ ಜೀವಕೋಶಗಳು ನೀರನ್ನು ಹೊರಹಾಕುತ್ತವೆ.
*ಮುಖಕ್ಕೆ ಮೊಸರಿನ ಫೇಸ್ ಪ್ಯಾಕ್ ಹಚ್ಚಿ. ಇದರಿಂದ ಊತವನ್ನು ಕಡಿಮೆ ಮಾಡಿ ಚರ್ಮ ಹೊಳೆಯುವಂತೆ ಮಾಡುತ್ತದೆ.
*ಈ ಸಮಸ್ಯೆಯನ್ನು ನಿವಾರಿಸಲು ಐಸ್ ಕ್ಯೂಬ್ ಗಳನ್ನು ಬಳಸಬಹುದು. ಬೆಳಿಗ್ಗೆ ಎದ್ದಾಗ ಮುಖ ಊದಿಕೊಂಡಿದ್ದರೆ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ.
*ಮುಖ ಊದಿಕೊಂಡಾಗ ಕಚ್ಚಾ ಆಲೂಗಡ್ಡೆಯನ್ನು ಪೀಸ್ ಗಳನ್ನು ಮುಖಕ್ಕೆ ಉಜ್ಜಿಕೊಳ್ಳಿ. 15 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ಮೂತದ ಊತ ಕಡಿಮೆಯಾಗುತ್ತದೆ.
*ಸೋಡಿಯಂ ಅಧಿಕವಾದಾಗ ಮುಖದಲ್ಲಿ ಊತ ಕಂಡುಬರುತ್ತದೆ. ಹಾಗಾಗಿ ಸೋಡಿಯಂ ಆಹಾರ ಸೇವನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿ.