ಪುದೀನಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗೇ ಇದರಿಂದ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಕೂದಲು ಮತ್ತು ಚರ್ಮಕ್ಕೆ ಇದು ತುಂಬಾ ಉಪಯೋಗಕಾರಿ.
ಪುದೀನಾದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿದ್ದು, ಇದು ಚರ್ಮದ ಮೇಲೆ ಮೂಡಿರುವ ಮೊಡವೆಗಳನ್ನು ನಿವಾರಿಸುತ್ತದೆ. ಕಪ್ಪು ಕಲೆಗಳನ್ನು ಸ್ವಚ್ಚಗೊಳಿಸುತ್ತದೆ. ಮುಖದ ಸುಕ್ಕುಗಳನ್ನು ನಿವಾರಿಸುತ್ತದೆ. ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ. ನಂತರ ಅದನ್ನು ಸೋಸಿ ಸ್ಪ್ರೇ ಬಾಟಲಿನಲ್ಲಿ ಸ್ಟೋರ್ ಮಾಡಿ ದಿನಕ್ಕೆ 2-3 ಬಾರಿ ಮುಖಕ್ಕೆ ಹಚ್ಚಿ. ಇದರಿಂದ ಚರ್ಮದ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ಚರ್ಮ ಹೊಳೆಯುವಂತೆ ಮಾಡುತ್ತದೆ.
ಆಂಟಿ ಆಕ್ಸಿಡೆಂಟ್ ಗಳು ಪುದೀನಾ ಎಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಕೂದಲಿನ ಬೆಳವಣಿಗೆಗೆ ಇದು ಅತ್ಯುತ್ತಮ ಮೂಲವಾಗಿದೆ. ಕೂದಲು ಉದುರುವುದನ್ನು ತಡೆಯಲು ಇದು ಪ್ರಯೋಜನಕಾರಿ. ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದನ್ನು ತಣ್ಣಗಾಗಿಸಿ. ಆ ನೀರನ್ನು ಕೂದಲಿನ ಬುಡಕ್ಕೆ ಹಚ್ಚಿ ನೆತ್ತಿಯನ್ನು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ 15 ನಿಮಿಷಗಳ ನಂತರ ತಲೆ ತೊಳೆಯಿರಿ. ಇದನ್ನು ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.