alex Certify ಈ 5 ವಿಟಮಿನ್ ಗಳು ಕಾಪಾಡುತ್ತವೆ ಚರ್ಮದ ಆರೋಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 5 ವಿಟಮಿನ್ ಗಳು ಕಾಪಾಡುತ್ತವೆ ಚರ್ಮದ ಆರೋಗ್ಯ

ಚರ್ಮವು ಆರೋಗ್ಯವಾಗಿರಲು ವಿಟಮಿನ್ ಗಳು ಅತಿ ಅಗತ್ಯ. 13 ವಿಧದ ವಿಟಮಿನ್ ಗಳಲ್ಲಿ 5 ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಅವು ಯಾವುವು? ಎಂಬುದನ್ನು ತಿಳಿದುಕೊಳ್ಳಿ.

*ವಿಟಮಿನ್ ಸಿ : ಇದು ಚರ್ಮದ ವಯಸ್ಸಾದ ಚಿಹ್ನೆಗಳನ್ನು ನಿವಾರಿಸುತ್ತದೆ. ಜೀವಕೋಶಗಳ ಹಾನಿಯನ್ನು ಕಡಿಮೆ ಮಾಡುತ್ತದೆ. ಕಿತ್ತಳೆ, ನಿಂಬೆ, ಮುಂತಾದ ಹಣ್ಣುಗಳನ್ನು ಸೇವಿಸುವುದರಿಂದ ವಿಟಮಿನ್ ಸಿ ನಿಮ್ಮ ದೇಹಕ್ಕ ಸಿಗುತ್ತದೆ.

*ವಿಟಮಿನ್ ಇ : ವಿಟಮಿನ್ ಇ ಸೂರ್ಯನ ಕಿರಣಗಳಿಂದ ಹಾನಿಯನ್ನು ಕಡಿಮೆ ಮಾಡುತ್ತದೆ. ಮತ್ತು ಚರ್ಮವನ್ನು ಹೈಡ್ರೀಕರಿಸುತ್ತದೆ. ಚರ್ಮದಿಂದ ನೈಸರ್ಗಿಕವಾಗಿ ಎಣ್ಣೆ ಉತ್ಪತ್ತಿಯಾಗುವಂತೆ ಮಾಡುತ್ತದೆ. ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ.

*ವಿಟಮಿನ್ ಕೆ : ವಿಟಮಿನ್ ಕೆ ಸ್ಟ್ರೆಚ್ ಮಾರ್ಕ್ಸ್, ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್, ದೇಹದಲ್ಲಿರುವ ಕಪ್ಪು ಕಲೆಗಳನ್ನು ತೊಡೆದುಹಾಕಲು ಸಹಕಾರಿಯಾಗಿದೆ.

*ವಿಟಮಿನ್ ಬಿ 5 : ಇದು ತೇವಾಂಶವನ್ನು ಉಳಿಸಿಕೊಳ್ಳಲು ಸಹಕಾರಿ. ಇದು ಸುಕ್ಕುಗಳು ಮತ್ತು ಮುಖದಲ್ಲಿರುವ ಗೆರೆಗಳನ್ನು, ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ.

*ವಿಟಮಿನ್ ಬಿ3 : ಇದು ಚರ್ಮದ ಉರಿಯೂತವನ್ನು ಕಡಿಮ ಮಾಡಲು ಸಹಕಾರಿಯಾಗಿದೆ. ತೇವಾಂಶವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ಚರ್ಮವು ಮೃದುವಾಗಿರಲು ಸಾಧ್ಯವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...