ಋತುವು ಬದಲಾದ ಸಮಯದಲ್ಲಿ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ತಂಪಾದ ವಾತಾವರಣದ ಕಾರಣ ಜನರು ಹೆಚ್ಚಾಗಿ ವಿವಿಧ ಸೋಂಕುಗಳಿಗೆ ಒಳಗಾಗುತ್ತಾರೆ. ಅದರಲ್ಲೂ ಹೆಚ್ಚಾಗಿ ಕಫದ ಸಮಸ್ಯೆ ಕಾಡುತ್ತದೆ. ಆದರೆ ಪದೇ ಪದೇ ಕಫದ ಸಮಸ್ಯೆ ಕಾಡಿದರೆ ಅದು ಈ ಕಾಯಿಲೆಗಳ ಲಕ್ಷಣ ಎನ್ನಲಾಗಿದೆ.
*ಹವಾಮಾನ ಬದಲಾದಂತೆ ಹೆಚ್ಚಿನ ಜನರು ಕಫ, ಶೀತದ ಸಮಸ್ಯೆಗೆ ಒಳಗಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ ವೈರಲ್ ಸೋಂಕು. ಇದರಿಂದ ದೇಹದಲ್ಲಿ ನೋವು ಶುರುವಾಗುತ್ತದೆ.
*ಚಳಿಗಾಲದಲ್ಲಿ ಪದೇ ಪದೇ ಕಫ ಕಟ್ಟಿಕೊಳ್ಳಲು ಕಾರಣ ಡಸ್ಟ್ ಅಲರ್ಜಿ ಸಮಸ್ಯೆ. ಹಾಗಾಗಿ ನೀವು ಹೊರಗಡೆ ಹೋಗುವಾಗ ಮಾಸ್ಕ್ ಗಳನ್ನು ಬಳಸಬೇಕು.
* ಚಳಿಗಾಲದಲ್ಲಿ ಅಸ್ತಮಾ ಸಮಸ್ಯೆ ಕಾಡುತ್ತದೆ. ಇದರಿಂದ ಎದೆನೋವು ಮತ್ತು ಉಬ್ಬಸ ಕಾಡುತ್ತದೆ.
*ಚಳಿಗಾಲದಲ್ಲಿ ಕಫದ ಸಮಸ್ಯೆ ಕಾಡಿದರೆ ನ್ಯೂಮೋನಿಯಾ ಸಮಸ್ಯೆಗೆ ಒಳಗಾಗುತ್ತಾರೆ. ಇದು ಬಹಳ ಗಂಭೀರವಾದ ಸಮಸ್ಯೆ. ಕಫದ ಜೊತೆಗೆ ತೀವ್ರ ಜ್ವರ ಕಂಡುಬರುತ್ತದೆ.