ಲವಂಗ ಎಣ್ಣೆ ಆ್ಯಂಟಿಫಂಗಲ್, ನಂಜುನಿವಾರಕ , ಆಂಟಿ ವೈರಲ್ ಗುಣಗಳನ್ನು ಹೊಂದಿದೆ. ಇದು ಅನೇಕ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಾಗಾಗಿ ಲವಂಗದ ಎಣ್ಣೆಯನ್ನು ಬಳಸಿದರೆ ಈ ಪ್ರಯೋಜನಗಳನ್ನು ಪಡೆಯಬಹುದು.
ಲವಂಗ ಎಣ್ಣೆ ಹಲ್ಲಿನ ಸಮಸ್ಯೆ ನಿವಾರಿಸಲು ಬಹಳ ಸಹಕಾರಿ. ಹಾಗಾಗಿ ಒಂದು ಲೋಟ ನೀರಿಗೆ ಕೆಲವು ಹನಿಗಳಷ್ಟು ಲವಂಗದ ಎಣ್ಣೆ ಬೆರೆಸಿ ಸೇವಿಸಿದರೆ ಹಲ್ಲು ನೋವು, ಬಾಯಿ ಹುಣ್ಣು ನಿವಾರಣೆಯಾಗುತ್ತದೆ.
ಲವಂಗ ಎಣ್ಣೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಜ್ವರ, ಶೀತ ಮುಂತಾದ ಕಾಯಿಲೆಗಳಿಂದ ದೂರವಿಡುತ್ತದೆ.
ಲವಂಗದ ಎಣ್ಣೆಯಲ್ಲಿ ಉರಿಯೂತದ ಗುಣಗಳಿದ್ದು, 4 ಹನಿ ಎಣ್ಣೆಯನ್ನು ಉಪ್ಪಿನಲ್ಲಿ ಬೆರೆಸಿ ಹಣೆಗೆ ಹಚ್ಚಿ ಮಸಾಜ್ ಮಾಡಿದರೆ ತಲೆನೋವು ತ್ವರಿತವಾಗಿ ಪರಿಹಾರವಾಗುತ್ತದೆ.
ಲವಂಗದ ಎಣ್ಣೆ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ.
ವಾಕರಿಕೆ, ವಾಂತಿ ಇದ್ದರೆ ಲವಂಗದ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಕುಡಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಮಧುಮೇಹಿಗಳಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಕಾರಿಯಾಗಿದೆ.