ಕ್ಯಾನ್ಸರ್ ಒಂದು ಭೀಕರವಾದ ಕಾಯಿಲೆ. ಇದರ ಚಿಕಿತ್ಸೆ ಗೆ ಬಹಳ ಹಣ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಇಂತಹ ಕಾಯಿಲೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಈ ತರಕಾರಿಗಳನ್ನು ಸೇವಿಸಬೇಕು.
ಕೋಸುಗಡ್ಡೆ, ಹೂಕೋಸು, ಎಲೆಕೋಸು ಈ ಮೂರು ತರಕಾರಿಗಳು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುತ್ತದೆ. ಇವುಗಳಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ವೈರಸ್ ಗಳ ವಿರುದ್ಧ ಹೋರಾಡುತ್ತವೆ. ಈ ತರಕಾರಿಗಳನ್ನು ತಿನ್ನುವುದರಿಂದ ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆಗಳಿಂದ ದೂರವಿರಬಹುದು.
ಆರೋಗ್ಯವಂತ ವ್ಯಕ್ತಿಯು ಹೂಕೋಸನ್ನು ಸಲಾಡ್ ಮತ್ತು ಸಾಂಬಾರ್ ಗಳಲ್ಲಿ ಸೇರಿಸಿ ಪ್ರತಿವಾರ ಕನಿಷ್ಠ 3ರಿಂದ 4 ಬಾರಿ ಸೇವಿಸಬೇಕು. ಹೂಕೋಸು ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ.