alex Certify ಹೀಗಿರಲಿ ಮೂಲವ್ಯಾಧಿ ಸಮಸ್ಯೆ ಇರುವವರ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿರಲಿ ಮೂಲವ್ಯಾಧಿ ಸಮಸ್ಯೆ ಇರುವವರ ಆಹಾರ

ಗುದನಾಳದಲ್ಲಿ ರಕ್ತನಾಳಗಳು ಊದಿಕೊಳ್ಳುತ್ತದೆ. ಇದರಿಂದ ಮಲವಿಸರ್ಜನೆ ಮಾಡಿವಾಗ ರಕ್ತ ಬರುತ್ತದೆ. ಇದಕ್ಕೆ ಪೈಲ್ಸ್ /ಮೂಲವ್ಯಾಧಿ ಸಮಸ್ಯೆ ಎನ್ನುತ್ತಾರೆ.

ಇದರಿಂದ ರಕ್ತ ಹೀನತೆ ಸಮಸ್ಯೆ ಕಾಡಬಹುದು. ಹಾಗಾಗಿ ಈ ಸಮಸ್ಯೆಯಿಂದ ಬಳಲುತ್ತಿರುವವರು ಯಾವ ಆಹಾರವನ್ನು ಸೇವಿಸಬೇಕು? ಸೇವಿಸಬಾರದು ಎಂಬುದನ್ನು ತಿಳಿದು ಇದನ್ನು ಬೇಗ ನಿವಾರಿಸಿಕೊಳ್ಳಿ.

ಈ ಆಹಾರವನ್ನು ಸೇವಿಸಬೇಡಿ:

*ಡೈರಿ ಉತ್ಪನ್ನಗಳಾದ ಹಾಲು, ಮೊಸರ ಇತ್ಯಾದಿಗಳನ್ನು ಸೇವಿಸಬೇಡಿ.

*ಮಾಂಸ ಮಲಬದ್ಧತೆಗೆ ಕಾರಣವಾಗುವುದರಿಂದ ಮಾಂಸವನ್ನು ಸೇವಿಸಬೇಡಿ.

*ಕರಿದ ಹಾಗೂ ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.

*ಉಪ್ಪಿನಾಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸಬೇಡಿ.

*ಆಲ್ಕೋಹಾಲ್ ಪಾನೀಯಗಳನ್ನು ಸೇವಿಸಬೇಡಿ.

ಈ ಆಹಾರವನ್ನು ಸೇವಿಸಿ:

*ಬಾರ್ಲಿ, ಬ್ರೌನ್ ರೈಸ್, ಓಟ್ಸ್ ಮತ್ತು ಬೀನ್ಸ್ ನಂತಹ ಆಹಾರಗಳನ್ನು ಸೇವಿಸಿ.

*ಕೋಸು, ಹೂಕೋಸು, ಬಾಳೆಹಣ್ಣು, ಕುಂಬಳಕಾಯಿ , ಸೌತೆಕಾಯಿಯಂತಹ ತರಕಾರಿ, ಹಣ್ಣುಗಳನ್ನು ಸೇವಿಸಿ.

*ಸರಿಯಾಗಿ ನೀರನ್ನು ಕುಡಿಯಿರಿ.

* ಪ್ರತಿದಿನ ವ್ಯಾಯಾಮ ಮಾಡಿ, ತೂಕವನ್ನು ನಿಯಂತ್ರಣದಲ್ಲಿಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...