ಮಾತ್ರೆ ತೆಗೆದುಕೊಳ್ಳುವುದು ಯಾವ ಹೊತ್ತಿನಲ್ಲಾದರೆ ಉತ್ತಮ ಎಂದು ಹಲವರು ಕೇಳುತ್ತಿರುತ್ತಾರೆ. ನಿಮ್ಮ ಸಂಶಯಕ್ಕೆ ಇಲ್ಲಿದೆ ಉತ್ತರ.
ನೀವು ಗ್ಯಾಸ್ಟ್ರಿಕ್ ಸಂಬಂಧಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಆಹಾರ ಸೇವಿಸುವ ಕನಿಷ್ಠ ಅರ್ಧದಿಂದ ಒಂದು ಗಂಟೆ ಮೊದಲು ಮಾತ್ರೆ ತಿನ್ನಿ. ಆಗ ಮಾತ್ರ ಗ್ಯಾಸ್ಟ್ರಿಕ್ ಮಾತ್ರೆಗಳು ಸಮರ್ಥವಾಗಿ ಕೆಲಸ ಮಾಡುತ್ತವೆ.
ಶುಗರ್ ಮಾತ್ರೆಗಳಾದರೆ ಊಟಕ್ಕೆ ಮುನ್ನ ತಿನ್ನಿ. ಅಥವಾ ವೈದ್ಯರ ಸಲಹೆ ಪಡೆದು ಸೇವಿಸಿ. ಮಧುಮೇಹಕ್ಕೆ ಇನ್ಸುಲಿನ್ ತೆಗೆದುಕೊಳ್ಳುವವರಾದರೆ ಆಹಾರ ಸೇವಿಸುವ ಕನಿಷ್ಠ ಅರ್ಧ ಗಂಟೆ ಮುಂಚೆ ಇಂಜೆಕ್ಷನ್ ತೆಗೆದುಕೊಳ್ಳಿ.
ಜ್ವರ, ಶೀತ, ಕೆಮ್ಮುವಿಗೆ ಸಂಬಂಧಿಸಿದ ಮಾತ್ರೆಗಳಾದರೆ, ಪೈನ್ ಕಿಲ್ಲರ್ ಗಳಾಗಿದ್ದರೆ, ಆಂಟಿ ಬಯಾಟಿಕ್ ಮಾತ್ರೆಗಳಾದರೆ ಊಟವಾದ ಬಳಿಕ ಅರ್ಧ ಗಂಟೆ ನಂತರ ಮಾತ್ರೆ ಸೇವಿಸಿ. ಆಗ ಮಾತ್ರ ಮಾತ್ರೆಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲವು. ವಿಟಮಿನ್ ಮಾತ್ರೆಗಳಾದರೆ ಊಟಕ್ಕೆ ಅಥವಾ ಉಪಹಾರಕ್ಕೆ ಕನಿಷ್ಠ 30 ನಿಮಿಷ ಮೊದಲು ಸೇವಿಸಿ.