ತೊಡೆಯ ಸಂಧಿಯಲ್ಲಿ, ಕಂಕುಳ ಭಾಗದಲ್ಲಿ ಮೂಡುವ ಕೆಂಪು ಬಣ್ಣದ ಸಣ್ಣ ಗುಳ್ಳೆಗಳು ಕ್ರಮೇಣ ತುರಿಕೆ ಹೆಚ್ಚಿಸಿಕೊಂಡು ಭಾರೀ ಕಿರಿಕಿರಿ ಮಾಡುತ್ತವೆ. ಇದಕ್ಕೆ ಫಂಗಲ್ ಇನ್ ಫೆಕ್ಷನ್ ಎಂದೂ ಕರೆಯಲಾಗುತ್ತದೆ. ಇದು ಒಂದೆಡೆಯಿಂದ ಇನ್ನೊಂದು ಭಾಗಕ್ಕೆ ಹಬ್ಬಿ ತುರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಸ್ವಚ್ಛತೆಯ ಕೊರತೆ ಇದಕ್ಕೆ ಮುಖ್ಯ ಕಾರಣ. ಕೆಲವೊಮ್ಮೆ ಕೆಮಿಕಲ್ ಮತ್ತು ಆಲ್ಕೋಹಾಲ್ ಸೇವನೆಯೂ ಇದಕ್ಕೆ ಕಾರಣವಾಗಿರಬಹುದು. ಇದಕ್ಕೆ ಮನೆಯಂಗಳದಲ್ಲಿರುವ ಸೊಪ್ಪುಗಳಿಂದ ಮದ್ದು ಮಾಡಬಹುದು. ಎಕ್ಕೆ ಗಿಡದ ಎಲೆ ತೆಗೆದಾಗ ಬರುವ ಹಾಲನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿದರೆ ವಾರದೊಳಗೆ ಈ ಕಜ್ಜಿ ದೂರವಾಗುತ್ತದೆ.
ಹಸಿ ಅರಿಶಿನ ತೇದು ಎರಡು ಹನಿ ಸಾಸಿವೆ ಎಣ್ಣೆ ಬಿಸಿ ಮಾಡಿ ಬೆರೆಸಿ ಹಚ್ಚಿದರೂ ಇನ್ ಫೆಕ್ಷನ್ ದೂರವಾಗುತ್ತದೆ. ಸಾಮ್ರಾಣಿ ಎಲೆಗಳು ಅಥವಾ ಅದರ ರಸವೂ ಇದೇ ಪರಿಣಾಮ ಬೀರುತ್ತದೆ.
ಬ್ರಾಹ್ಮೀ ಎಲೆಗಳನ್ನು ಬೇರು ಸಹಿತ ಕಿತ್ತು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಒಂದು ಚಮಚ ಜೇನು ಸೇರಿಸಿ ಕುಡಿದರೆ ಎಲ್ಲಾ ರೀತಿಯ ಚರ್ಮ ರೋಗಗಳು ಬಹುಬೇಗ ದೂರವಾಗುತ್ತವೆ.
ಈ ಎಲ್ಲ ಔಷಧಗಳನ್ನು ಮಾಡುವಾಗ ಕಡ್ಡಾಯವಾಗಿ ಮದ್ಯಪಾನ ಮಾಡದಿರಿ. ಹಾಗೂ ಕಾಫಿ ಚಹಾಗೆ ತಾತ್ಕಾಲಿಕವಾಗಿ ಬಾಯ್ ಹೇಳಿ. ಒಳಉಡುಪುಗಳನ್ನು ಸ್ವಚ್ಛವಾಗಿ ತೊಳೆಯಲು ಮರೆಯದಿರಿ.