ಅಂಗಡಿಗಳನ್ನು ನಿರ್ಮಿಸುವಾಗ ವಾಸ್ತು ತುಂಬಾ ಮುಖ್ಯ. ವಾಸ್ತು ಪ್ರಕಾರವಿಲ್ಲದಿದ್ದರೆ ವ್ಯಾಪಾರ, ವ್ಯವಹಾರದಲ್ಲಿ ನಷ್ಟವಾಗುತ್ತದೆ, ಹಣದ ಸಮಸ್ಯೆ ಎದುರಾಗುತ್ತದೆ. ಆದಕಾರಣ ಅಂಗಡಿಗಳನ್ನು ನಿರ್ಮಿಸುವಾಗ ಈ ವಾಸ್ತುವನ್ನು ಪಾಲಿಸಿ.
ನಿಮ್ಮ ಅಂಗಡಿಯ ಪ್ರವೇಶ ದ್ವಾರವು ಪಶ್ಚಿಮ ಅಥವಾ ದಕ್ಷಿಣಕ್ಕಿದ್ದರೆ ನಿಮ್ಮ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಲು ಅಥವಾ ಏಳಿಗೆಯಾಗಲು ಸಾಧ್ಯವಿಲ್ಲ.
ಆದರೆ ದಿನಸಿ ಅಂಗಡಿಗಳ ಹಾಗೂ ಆಟಿಕೆ ಅಂಗಡಿಗಳ ಪ್ರವೇಶ ದ್ವಾರ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗಿದ್ದರೆ ಅದು ವ್ಯಾಪಾರಕ್ಕೆ ಶುಭವೆಂದು ಪರಿಗಣಿಸಲಾಗಿದೆ.
ಇತರ ಅಂಗಡಿಗಳ ಪ್ರವೇಶ ದ್ವಾರವು ಪೂರ್ವ ದಿಕ್ಕಿನಲ್ಲಿದ್ದರೆ ಲಾಭವಾಗಲಿದೆ. ಪ್ರವೇಶ ದ್ವಾರವು ಉತ್ತರ ದಿಕ್ಕಿನಲ್ಲಿದ್ದರೆ ಹಣ ಮತ್ತು ಖ್ಯಾತಿ ಸಿಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ತಿಳಿಸುತ್ತಾರೆ.