ಮಕ್ಕಳ ಬಟ್ಟೆಯ ಕಲೆ ತೆಗೆಯಲಾರದೆ ಸೋತು ಹೋಗಿದ್ದೀರಾ. ಯಾವ ಡಿಟರ್ಜೆಂಟ್ ಕೂಡಾ ನಿಮ್ಮ ಕೈ ಹಿಡಿದಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ. ಕಲೆ ತೆಗೆಯುವ ಅತ್ಯುತ್ತಮ ಟಿಪ್ಸ್ ಗಳು ಇಲ್ಲಿವೆ.
ಬಟ್ಟೆಗೆ ಚಹಾ ಕಾಫಿ ಅಥವಾ ಕೆಸರು ತಾಗಿದರೆ ಅ ಕೂಡಲೆ ಅದನ್ನು ನೀರಿನಲ್ಲಿ ಮುಳುಗಿಸಿ ಉಜ್ಜದಿರಿ. ಮೊದಲು ಕಲೆಯನ್ನು ಒಣಗಲು ಬಿಡಿ. ಇಲ್ಲವಾದರೆ ಅದು ಮತ್ತಷ್ಟು ಅಗಲಕ್ಕೆ ಹಬ್ಬಿ, ತೆಗೆಯುವ ಪ್ರಕ್ರಿಯೆ ಮತ್ತಷ್ಟು ದೀರ್ಘವಾಗುತ್ತದೆ.
ಒಣಗಿದ ಬಳಿಕ ತಿನಿಸಿನ ಅಥವಾ ಮಣ್ಣಿನ ಕಲೆಯಾಗಿದ್ದರೆ ಅದನ್ನು ಚಾಕುವಿನಿಂದ ಎತ್ತಿ. ಬಳಿಕ ಆ ಜಾಗಕ್ಕೆ ಮಾತ್ರ ಬ್ರಶ್ ನಿಂದ ತಿಕ್ಕಿ. ಒಂದೆರಡು ಬೆರಳುಗಳ ಸಹಾಯದಿಂದ ಕಲೆ ಇರುವ ಜಾಗವನ್ನು ಮಾತ್ರ ಒತ್ತಿ ತೊಳೆದು ಸ್ವಚ್ಛ ಮಾಡಿ.
ನಾಲ್ಕಾರು ಹೀಗೆ ಪುನರಾವರ್ತಿಸಿದ ಬಳಿಕ ಕಲೆ ಹೋಗಿದೆಯೇ ನೋಡಿ. ಇದು ಕಲೆ ತೆಗೆಯುವ ಸುಲಭ ವಿಧಾನ. ಇನ್ನು ಸುಲಭದಲ್ಲಿ ಹೋಗದೆ ದಪ್ಪ ಕಲೆಯಾಗಿದ್ದರೆ ಸ್ಟ್ರಾಂಗ್ ಡಿಟರ್ಜೆಂಟ್ ನಲ್ಲಿ ನಿಮ್ಮ ಉಡುಪನ್ನು ಅರ್ಧ ಗಂಟೆ ಹೊತ್ತು ನೆನೆಸಿಡಿ. ಬಳಿಕ ವಾಷಿಂಗ್ ಮೆಶಿನ್ ನಲ್ಲಿ ತೊಳೆಯಿರಿ ಇಲ್ಲವೇ ಕೈಯಿಂದ ತಿಕ್ಕಿ ತೊಳೆಯಿರಿ.