ಕೆಲವರ ಕೂದಲು ವಿಪರೀತವಾಗಿ ಉದುರುತ್ತದೆ. ಹೀಗೆ ಉದುರುವುದರ ಮೂಲಕ ಕೆಲವೊಮ್ಮೆ ತಲೆ ಬೋಳಾಗುತ್ತದೆ. ಮತ್ತೆ ಅಲ್ಲಿ ಕೂದಲು ಬೆಳೆಯುವುದಿಲ್ಲ. ಇಂತಹ ಸಮಸ್ಯೆ ಇರುವವರು ಬೊಕ್ಕ ತಲೆಯಲ್ಲಿ ಮತ್ತೆ ಕೂದಲು ಬೆಳೆಯಲು ಈ ಮನೆ ಮದ್ದನ್ನು ಬಳಸಿ.
ರೋಸ್ಮರಿ ಎಣ್ಣೆ : ಇದು ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ಆದ್ದರಿಂದ ಇದರಿಂದ ಕೂದಲುದುರುವ ಸಮಸ್ಯೆಗೆ ಚಿಕಿತ್ಸೆ ನೀಡಬಹುದು. ಈ ಎಣ್ಣೆಯನ್ನು ಪ್ರತಿ ರಾತ್ರಿ ನಿಮ್ಮ ಬೋಳು ತಲೆಗೆ ಹಚ್ಚಿ ಮಸಾಜ್ ಮಾಡಿ. ಬೆಳಿಗ್ಗೆ ತಲೆ ಸ್ನಾನ ಮಾಡಿ.
ಲೋಳೆರಸ (ಅಲೋವೆರಾ): ಇದು ನಿಮ್ಮ ಕೂದಲ ಬೆಳವಣೆಗೆಗೆ ಸಹಕಾರಿ. ಇದರಿಂದ ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ. ನೀವು ತಲೆಗೆ ಹಚ್ಚುವ ಎಣ್ಣೆಗೆ ಸ್ವಲ್ಪ ಅಲೋವೆರಾವನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ.
ಮೊಟ್ಟೆಯ ಹಳದಿ ಭಾಗ : ಇದು ಕೂದಲಿನ ಬೆಳವಣೆಗೆಗೆ ಉತ್ತಮವಾಗಿದೆ. ಮೊಟ್ಟೆಯ ಹಳದಿ ಭಾಗವನ್ನು ಕೂದಲಿಗೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ತಣ್ಣಿರಿನಿಂದ ವಾಶ್ ಮಾಡಿ. ಬಳಿಕ ಶಾಂಪೂ ಹಚ್ಚಿ ವಾಶ್ ಮಾಡಿ.