HomeHealthಅಸ್ತಮಾ ಸಮಸ್ಯೆಯಿದೆಯಾ.....? ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಅಸ್ತಮಾ ಸಮಸ್ಯೆಯಿದೆಯಾ…..? ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಅಸ್ತಮಾ ಸಮಸ್ಯೆ ಹಲವರನ್ನು ಕಾಡುತ್ತದೆ. ಅದರಲ್ಲಿಯೂ ಚಳಿಗಾಲ ಆರಂಭವಾಯಿತೆಂದರೆ ಈ ಸಮಸ್ಯೆ ಉಲ್ಬಣಗೊಳ್ಳುವುದು ಸಾಮಾನ್ಯ. ಅಧ್ಯಯನದ ಪ್ರಕಾರ ಪ್ರತಿ 12 ಜನರಲ್ಲಿ ಒಬ್ಬರು ಅಸ್ತಮಾದಿಂದ ಬಳಲುತ್ತಾರೆ ಎನ್ನಲಾಗಿದೆ.

ಅಸ್ತಮಾ ಸಮಸ್ಯೆಯಿರುವ ಬಹುತೇಕ ಜನರು ಆಸ್ತಾಲಿನ್, ಇನ್ ಹೇಲರ್ ಮೇಲೆ ಡಿಪೆಂಡ್ ಆಗಿರುತ್ತಾರೆ. ಆದರೆ ಆಸ್ತಮಾ ಸಮಸ್ಯೆಯನ್ನು ಮನೆ ಮದ್ದಿನ ಮೂಲಕವೂ ಸುಲಭವಾಗಿ ಪರಿಹರಿಸಿಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶುಂಠಿ: ಶುಂಠಿಯನ್ನು ಹೆಚ್ಚಾಗಿ ಬಳಸುವುದರಿಂದ, ಶುಂಠಿ ಕಷಾಯ, ಶುಂಠಿ ನೀರು ಸೇವನೆಯಿಂದಾಗಿ ಅಸ್ತಮಾ ಲಕ್ಷಣಗಳು ಕಡಿಮೆಯಾಗುತ್ತದೆ.

ಅರಿಷಿಣ: ಅರಿಷಿಣ ಅಡುಗೆ ಮನೆಯಲ್ಲಿ ಬೇಗನೇ ಕೈಗೆ ಸಿಗುವ ಮತ್ತೊಂದು ಆರೋಗ್ಯಕಾರಿ ಪದಾರ್ಥ. ಬಿಸಿ ನೀರಿನಲ್ಲಿ ಸ್ವಲ್ಪ ಅರಿಷಿಣ ಬೆರೆಸಿ ಕುಡಿಯುವುದರಿಂದ ಉಸಿರಾಟವನ್ನು ಸರಾಗವಾಗಿ ಮಾಡಲು ಸಹಾಯಕಾರಿಯಾಗುತ್ತದೆ. ಕಫದಂತಹ ಸಮಸ್ಯೆಯನ್ನು ಇದು ಶಮನ ಮಾಡುತ್ತದೆ.

ಜೇನುತುಪ್ಪ: ಇದು ಅಸ್ತಮಾ ರೋಗಿಗಳಿಗೆ ಹೆಚ್ಚು ಉಪಯುಕ್ತ. ಅಸ್ತಮಾದಿಂದ ಬರುವ ಅಲರ್ಜಿ, ಸೋಂಕಿನಂತಹ ಅಪಾಯವನ್ನು ನಿವಾರಿಸಬಲ್ಲದು.

For Latest News Updates, Join Our Whatsapp Community🚩
RELATED ARTICLES

Most Popular