ಕಲಿಕಾ ಹಂತದಲ್ಲಿರುವ ಮಕ್ಕಳಿಗೆ ನೆನಪಿನ ಶಕ್ತಿ ಅನ್ನೋದು ತುಂಬಾನೇ ಮುಖ್ಯ. ಒಳ್ಳೆಯ ನೆನಪಿನ ಶಕ್ತಿ ನಿಮ್ಮ ಮಗುವಿನ ಜ್ಞಾನಾರ್ಜನೆ ಹೆಚ್ಚಾಗಲು ಸಹಕಾರಿ. ಹಾಗಂತ ಎಲ್ಲಾ ಮಕ್ಕಳ ಮೆಮೊರಿ ಪವರ್ ಒಂದೇ ರೀತಿ ಇರುತ್ತೆ ಅಂತಾ ಹೇಳೋಕೆ ಬರಲ್ಲ.
ಮಕ್ಕಳ ಮೆಮೊರಿ ಪವರ್ ಹೆಚ್ಚು ಮಾಡೋಕೆ ಪ್ರಯತ್ನ ಮಾಡ್ತಾ ಇರೋರಲ್ಲಿ ನೀವು ಒಬ್ಬರಾಗಿದ್ರೆ ಅವರಿಗೆ ನೆನಪಿನ ಶಕ್ತಿ ಹೆಚ್ಚಿಸುವಂತ ಆಟಗಳನ್ನೇ ಹೆಚ್ಚಾಗಿ ಆಡೋಕೆ ನೀಡಿ. ಗೂಗಲ್ನಲ್ಲಿ ನಿಮಗೆ ನೆನಪಿನ ಶಕ್ತಿ ಹೆಚ್ಚಳಕ್ಕೆ ಸಂಬಂಧಿಸಿದ ಸಾಕಷ್ಟು ಗೇಮ್ಗಳು ಸಿಗುತ್ತವೆ. ಇದರಲ್ಲಿ ದಿನಕ್ಕೊಂದರಂತೆ ಮಕ್ಕಳಿಗೆ ಟಾಸ್ಕ್ ನೀಡಿ.
ಮಕ್ಕಳಿಗೆ ಏನನ್ನಾದರೂ ಕಲಿಸುವ ನೀವು ಅದಕ್ಕೆ ಸೂಕ್ತ ಉದಾಹರಣೆ ಕೊಡೋದನ್ನ ಮರೆಯದಿರಿ. ಅತ್ಯಾಕರ್ಷಕ ಕಲಿಕೆಯಿಂದ ಮಕ್ಕಳು ಪಠ್ಯವನ್ನ ಹೆಚ್ಚಾಗಿ ಗ್ರಹಿಸಿಕೊಳ್ಳಬಲ್ಲರು. ಸುತ್ತಮುತ್ತಲಿನ ವಸ್ತುಗಳನ್ನ ಉದಾಹರಣೆ ನೀಡೋ ಮೂಲಕ ಶಿಕ್ಷಣ ನೀಡಬಹುದು.
ಮಕ್ಕಳ ಮನಸ್ಸಲ್ಲಿ ನೀವು ಮಾಡಿದ ಪಾಠ ಇರಬೇಕು ಅಂದರೆ ಅದನ್ನ ದೃಶ್ಯದ ಮೂಲಕ ತೋರಿಸಬಬಹುದು. ನಕ್ಷೆಯ ಮೂಲಕ, ಮಾಡೆಲ್ಗಳನ್ನ ತಯಾರು ಮಾಡೋದ್ರ ಮೂಲಕ ಅಥವಾ ನೀವೇ ನಟಿಸಿ ತೋರಿಸೋ ಮೂಲಕ ಮಕ್ಕಳಿಗೆ ಪಾಠ ಮಾಡಬಹುದು.
ಮಕ್ಕಳಿಗೆ ಒಂದು ವಿಷಯವನ್ನ ಕಲಿಸುವಾಗ ಅವರ ಮೇಲೆ ಒತ್ತಡ ಹಾಕಲೇಬೇಡಿ. ಮಕ್ಕಳು ನಿರಂತರವಾಗಿ ಹೆದರುತ್ತಿದ್ದರೆ, ಪೋಷಕರು ಪದೇ ಪದೇ ಗದರಿಸ್ತಾ ಹೋದರೆ ಮಕ್ಕಳ ಮಾನಸಿಕ ಸ್ಥಿತಿ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳಿಗೆ ಯಾವುದೇ ಒತ್ತಡ ಹೇರದೇ ತಾಳ್ಮೆಯಿಂದ ಪಾಠ ಮಾಡಿದ್ರೆ ಕಲಿಕೆಯ ಗುಣಮಟ್ಟ ಹೆಚ್ಚೋದ್ರ ಜೊತೆಗೆ ಮಕ್ಕಳ ನೆನಪಿನ ಶಕ್ತಿಯೂ ವೃದ್ಧಿಸುತ್ತೆ.