ಮೂವತ್ತರ ಗಡಿ ದಾಟುತ್ತಲೇ ಕೂದಲು ಉದುರುವ ಸಮಸ್ಯೆಯಿಂದ ಬಳಲುವ ಪುರುಷರೇ ಹೆಚ್ಚು. ಈ ಸಮಸ್ಯೆಯಿಂದ ಹೊರಬರುವುದು ಅಷ್ಟು ಸುಲಭವಲ್ಲ. ಕೂದಲು ಉದುರಲು ಆರಂಭಿಸಿದಾಗಲೇ ಎಚ್ಚೆತ್ತರೆ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಹಣೆ ಅಥವಾ ನೆತ್ತಿ ಬೋಳಾಗುವ ಮೊದಲ ಲಕ್ಷಣ ಎಂದರೆ ಹಣೆಯ ಕೂದಲು ಹಿಂದೆ ಸರಿಯುವುದು. ಇದು ಬಕ್ಕತನದ ಸೂಚನೆಯಾಗಿದೆ.
ನೆತ್ತಿಯ ತುದಿಯಲ್ಲಿ ಸಣ್ಣದಾಗಿ ಆರಂಭವಾಗುವ ಇದು ಕ್ರಮೇಣ ದೊಡ್ಡದಾಗುತ್ತಾ ಬೆಳೆದು ಆಸುಪಾಸಿನ ಕೂದಲನ್ನು ಬಲಿ ಪಡೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಅಪೌಷ್ಠಿಕತೆ. ತಲೆಯಲ್ಲಿ ತುರಿಕೆ ಅಥವಾ ಹೊಟ್ಟಿನ ಸಮಸ್ಯೆ ವಿಪರೀತ ಇದ್ದರೂ ಕೂದಲು ಉದುರುತ್ತದೆ.
ಅನುವಂಶಿಕ ಕಾರಣಗಳಿಂದ ಕೂದಲು ಕಡಿಮೆಯಾಗಿ ತಲೆ ಬೋಳಾಗುವುದನ್ನು ತಡೆಯಲು ಸಾಧ್ಯವೇ ಇಲ್ಲ. ಇದರ ಹೊರತಾಗಿ ಕೂದಲಿಗೆ ಅತ್ಯುತ್ತಮ ಪೋಷಣೆ ನೀಡುವ ಮೂಲಕ, ವಾರಕ್ಕೆರಡು ಬಾರಿ ತೆಂಗಿನೆಣ್ಣೆಯಿಂದ ಮಸಾಜ್ ಮಾಡುವ ಮೂಲಕ, ಕೂದಲಿನ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡಬಹುದು.