ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ಇದ್ದರೆ ಚೆನ್ನಾಗಿರುತ್ತದೆ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಮುಂಬೈ ಸ್ಟೈಲ್ ಚೀಸ್ ಚಿಲ್ಲಿ ಟೋಸ್ಟ್ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಕೊತ್ತಂಬರಿಸೊಪ್ಪು, ¼ ಟೀ ಸ್ಪೂನ್ – ಚಾಟ್ ಮಸಾಲ, 1 – ಹಸಿಮೆಣಸು, ಉಪ್ಪು – ರುಚಿಗೆ ತಕ್ಕಷ್ಟು, 1 ರಿಂದ 2 ಟೀ ಸ್ಪೂನ್ ನೀರು, ½ ಕಪ್ ತುರಿದ ಚೀಸ್, 1 ರಿಂದ 1.5 ಟೀ ಸ್ಪೂನ್ ನಷ್ಟು ಚಿಕ್ಕದ್ದಾಗಿ ಕತ್ತರಿಸಿದ ಮೆಣಸು, 2 ಟೇಬಲ್ ಸ್ಪೂನ್ – ಚಿಕ್ಕದ್ದಾಗಿ ಕತ್ತರಿಸಿದ ಕ್ಯಾಪ್ಸಿಕಂ, 1 ಟೇಬಲ್ ಸ್ಪೂನ್ – ಕತ್ತರಿಸಿದ ಕೊತ್ತಂಬರಿಸೊಪ್ಪು, 8 ರಿಂದ 10 ಬ್ರೆಡ್ ಸ್ಲೈಸ್, ಬೆಣ್ಣೆ – ಬೇಕಾಗುವಷ್ಟು.
ಮಾಡುವ ವಿಧಾನ:
ಮೊದಲಿಗೆ ಒಂದು ಮಿಕ್ಸಿ ಜಾರಿಗೆ ½ ಕಪ್ ಕೊತ್ತಂಬರಿಸೊಪ್ಪು, 1 ಹಸಿಮೆಣಸು, ಚಾಟ್ ಮಸಾಲ, ಉಪ್ಪು, ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬೌಲ್ ಗೆ ತುರಿದ ಚೀಸ್, ಕತ್ತರಿಸಿಕೊಂಡ ಹಸಿಮೆಣಸು, ಕ್ಯಾಪ್ಸಿಕಂ, ಕೊತ್ತಂಬರಿಸೊಪ್ಪು, ಚಾಟ್ ಮಸಾಲ. ಸೇರಿಸಿ ಮಿಕ್ಸ್ ಮಾಡಿ ಕೊಳ್ಳಿ.
ಬ್ರೆಡ್ ಮೇಲೆ ಬೆಣ್ಣೆ ಸವರಿ ಇದರ ಮೇಲೆ ಗ್ರೀನ್ ಚಟ್ನಿ ಸ್ವಲ್ಪ ಸವರಿ ಇದರ ಮೇಲೆ ಚೀಸ್ ಮಿಶ್ರಣವನ್ನು ಎಲ್ಲ ಕಡೆ ಸಮನಾಗಿ ಹರಡಿ ನಂತರ ಇದರ ಮೇಲೆ ಬೆಣ್ಣೆ ಸವರಿದ ಇನ್ನೊಂದು ಬ್ರೆಡ್ ಅನ್ನು ಇಟ್ಟು ಸ್ಯಾಂಡ್ ವಿಚ್ ಮೇಕರ್ ಮೇಲಿಟ್ಟು 2 ರಿಂದ 3 ನಿಮಿಷಗಳ ಕಾಲ ಟೋಸ್ಟ್ ಮಾಡಿಕೊಳ್ಳಿ.