ಮನೆಯ ಪ್ರತಿಯೊಂದು ಕೋಣೆಯೂ ಗಮನ ಸೆಳೆಯುವಂತಿರಬೇಕು. ಮನೆಗೆ ಬರ್ತಿದ್ದಂತೆ ನೆಮ್ಮದಿ, ಖುಷಿ ಸಿಗಬೇಕು. ಅನೇಕರು ಮನೆ ಕಟ್ಟುವಾಗ ಮನೆಯ ಎಲ್ಲ ಕೋಣೆಯ ಬಗ್ಗೆ ವಿಶೇಷ ಗಮನ ನೀಡ್ತಾರೆ. ಆದ್ರೆ ಮನೆಯ ಬಾತ್ ರೂಮ್ ಬಿಟ್ಟುಬಿಡ್ತಾರೆ. ಅದಕ್ಕೆ ಯಾಕೆ ಹೆಚ್ಚಿನ ಹಣ ಖರ್ಚು ಮಾಡ್ಬೇಕು ಎಂಬ ಮನೋಭಾವ ಹೆಚ್ಚಿನವರಲ್ಲಿರುತ್ತದೆ.
ಆದ್ರೆ ಸ್ನಾನದ ಕೋಣೆಯ ಬಗ್ಗೆಯೂ ಗಮನ ಹರಿಸಬೇಕು. ಅದನ್ನು ಕೂಡ ನೀಟ್ ಎಂಡ್ ಕ್ಲಿನ್ ಆಗಿಟ್ಟರೆ ಮನಸ್ಸಿಗೆ ಖುಷಿ ಸಿಗುತ್ತದೆ. ಮೊದಲು ಮಾಡಬೇಕಾಗಿದ್ದು, ಬಾತ್ರೂಮ್ಗೆ ಅಂತಾನೇ ಇರುವ ವೆರೈಟಿ ವೆರೈಟಿ ಟೈಲ್ಸ್ಗಳ ಬಗ್ಗೆ ತಿಳಿದುಕೊಳ್ಳಬೇಕು.
ಮಾರುಕಟ್ಟೆಯಲ್ಲಿ ಭಿನ್ನ ಭಿನ್ನವಾಗಿರುವ ಟೈಲ್ಸ್ಗಳು ಸಿಗುತ್ತೆ. ಅದರಲ್ಲೂ ಬಾತ್ರೂಂಗೆ ಅಂತಾನೇ ಕಲರ್ಫುಲ್ ಆಗಿರುವ ಟೈಲ್ಸ್ಗಳು ಸಿಗುತ್ತೆ. ಇಷ್ಟವಾಗುವಂತಹ ಟೈಲ್ಸ್ಗಳನ್ನ ಆರಿಸಿ. ಗೋಡೆಗೆ ಬೇರೆ, ನೆಲಕ್ಕೆ ಬೇರೆ ಟೈಲ್ಸ್ ಹಾಕಬಹುದು. ಮನಸ್ಸಿಗೆ ಖುಷಿ ಕೊಡುವಂತಹ ಟೈಲ್ಸ್ಗಳನ್ನ ಆರಿಸಿಕೊಂಡು ಅದನ್ನ ಬಾತ್ರೂಂಗೆ ಹಾಕಿದ್ರೆ, ಬಾತ್ ರೂಮ್ ಆಕರ್ಷಕವಾಗಿ ಕಾಣುವ ಜೊತೆಗೆ ರಿಫ್ರೇಶ್ಮೆಂಟ್ ಸಿಗುತ್ತೆ.