ರೈಸ್ ಬಾತ್ ಇಷ್ಟಪಡುವವರಿಗೆ ಕೇಸರಿ ಬಳಸಿ ತಯಾರಿಸುವ ರುಚಿಕರ ತಿಂಡಿ ರೆಸಿಪಿ ಇಲ್ಲಿದೆ, ಸಿಹಿ ತಿನಿಸುಗಳು ಮಾಡುವಾಗ ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ. ಕೇಸರಿ ದಳ ಬಳಸಿಕೊಂಡು ಒಂದು ರುಚಿಕರವಾದ ಕೇಸರಿ ರೈಸ್ ಬಾತ್ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
½ ಟೀ ಸ್ಪೂನ್ – ಕೇಸರಿ, 2 ½ ಕಪ್ – ಬಾಸುಮತಿ ರೈಸ್, 1 ಟೇಬಲ್ ಸ್ಪೂನ್ – ರೋಸ್ ವಾಟರ್, ¼ ಕಪ್ – ಉದ್ದಕ್ಕೆ ಕತ್ತರಿಸಿಕೊಂಡ ಈರುಳ್ಳಿ, ಎಣ್ಣೆ – ಕರಿಯಲು, 2 ಟೇಬಲ್ ಸ್ಪೂನ್ – ತುಪ್ಪ, ¼ ಕಪ್ ಬಾದಾಮಿ, 1/4 ಕಪ್ – ದ್ರಾಕ್ಷಿ, ¼ ಕಪ್ – ಹಾಲು, ¼ ಕಪ್ – ಕತ್ತರಿಸಿದ ಈರುಳ್ಳಿ ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಒಂದು ಬೌಲ್ ಗೆ ಹಾಲು, ಕೇಸರಿದಳ, ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಉದ್ದಕ್ಕೆ ಸೀಳಿಕೊಂಡ ಈರುಳ್ಳಿಯನ್ನು ಫ್ರೈ ಮಾಡಿಕೊಂಡು ಒಂದು ತಟ್ಟೆಗೆ ತೆಗೆದುಕೊಳ್ಳಿ. ಒಂದು ಪ್ಯಾನ್ ಗೆ ತುಪ್ಪ ಹಾಕಿ ಅದನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಕತ್ತರಸಿದ ಈರುಳ್ಳಿ, ಬಾದಾಮಿ, ದ್ರಾಕ್ಷಿ ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಬೇಯಿಸಿದಕೊಂಡ ಅನ್ನ, ಬೌಲ್ ನಲ್ಲಿರುವ ಕೇಸರಿದಳದ ಮಿಶ್ರಣ, ಫ್ರೈ ಮಾಡಿಕೊಂಡ ಈರುಳ್ಳಿಯನ್ನು ಹಾಕಿ ಮಿಕ್ಸ್ ಮಾಡಿ ಹದ ಉರಿಯಲ್ಲಿ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ತರಕಾರಿ ಗ್ರೇವಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.