ಮನೆಯನ್ನು ಎಷ್ಟೇ ಸ್ವಚ್ಛಗೊಳಿಸಿದರು ವಾಸನೆ, ಗಲೀಜು ಬರುವುದು ತಪ್ಪಲ್ಲ. ಇದಕ್ಕಾಗಿ ದುಬಾರಿ ಬೆಲೆ ತೆತ್ತು ಏನೇನೋ ರಾಸಾಯನಿಕಗಳನ್ನು ಮನೆಗೆ ತರುವುದಕ್ಕಿಂತ ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ಕ್ಲೀನ್ ಮಾಡಬಹುದು.
ಅಡುಗೆ ಮನೆಯ ಸಿಂಕ್ ನಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ. ಕೆಲವೊಮ್ಮೆ ಇದರಿಂದ ಜಿರಳೆಗಳು ಬರುವುದು ಇದೆ. ಪಾತ್ರೆ ತೊಳೆಯುವಾಗ ಉಳಿದ ಪದಾರ್ಥಗಳು ಸಿಂಕ್ ಬಳಿ ಅಂಟಿಕೊಂಡು ಒಂದು ರೀತಿಯ ವಾಸನೆ ಬರುತ್ತಿರುತ್ತದೆ. ಹಾಗೇ ಕೆಲವೊಮ್ಮೆ ನೀರು ಸರಿಯಾಗಿ ಹೋಗದೆ ಇರುವುದರಿಂದ ಕೂಡ ವಾಸನೆ ಬರುತ್ತದೆ. ಹೀಗಾಗಿ ರಾತ್ರಿ ಅಡುಗೆಮನೆ ಸ್ವಚ್ಛಗೊಳಿಸಿದ ಬಳಿಕ ಸಿಂಕ್ ನ ನೀರು ಹೋಗುವ ಜಾಗದ ಬಳಿ ಅರ್ಧ ಕಪ್ ಬೇಕಿಂಗ್ ಸೋಡಾ, ½ ಕಪ್ ಆ್ಯಪಲ್ ಸೈಡರ್ ವಿನೇಗರ್ ಹಾಕಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಇದಕ್ಕೆ 2ಗ್ಲಾಸ್ ನಷ್ಟು ಬಿಸಿ ನೀರನ್ನು ಹಾಕಿಬಿಡಿ. ಇದರಿಂದ ಸಿಂಕ್ ನ ಪೈಪ್ ನಲ್ಲಿ ಶೇಖರವಾದ ಗಲೀಜು ನಿವಾರಣೆಯಾಗುತ್ತದೆ.
ಇನ್ನು ಬೇಕಿಂಗ್ ಸೋಡಾ ಇಲ್ಲದಿದ್ದರೆ ¼ ಕಪ್ ನಷ್ಟು ಕಲ್ಲುಪ್ಪು, ಹಾಗೂ ಬಿಸಿ ನೀರು ಹಾಕಿದರೂ ಸಿಂಕ್ ನ ವಾಸನೆ ದೂರವಾಗುತ್ತದೆ.