ಖಾರವಾದ ಮೆಣಸಿನ ಸೇವನೆಯಿಂದ ಆರೋಗ್ಯ ಹಾನಿ ಎಂದಿರಾ…? ಇಲ್ಲ ಖಾರ ಮೆಣಸಿನ ಸೇವನೆಯಿಂದ ಹಲವು ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಪಡೆಯಬಹುದು. ವಿಟಮಿನ್ ಸಿ ಹೇರಳವಾಗಿರುವ ಇದರ ಸೇವನೆಯಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಖಾರವಾದ ಮೆಣಸಿನಕಾಯಿಯಲ್ಲಿ ಕಿತ್ತಳೆ ಹಣ್ಣಿಗಿಂತ ಮೂರು ಪಟ್ಟು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ಇದರಲ್ಲಿರುವ ವಿಟಮಿನ್ ಗುಣ ಮೈಗ್ರೇನ್, ಶೀತ ಸಮಸ್ಯೆಯನ್ನೂ ದೂರವಿಡುತ್ತದಂತೆ. ಇದರಲ್ಲಿರುವ ಪೋಷಕಾಂಶ ಮತ್ತು ವಿಟಮಿನ್ ಗಳು ಹಸಿವನ್ನು ಕಡಿಮೆ ಮಾಡುತ್ತವೆ. ಅನಗತ್ಯ ಕೊಬ್ಬನ್ನು ಕರಗಿಸಿ ದೇಹ ತೂಕ ಇಳಿಸಲು ನೆರವಾಗುತ್ತದೆ.
ಸಂಧಿವಾತ ಸಮಸ್ಯೆಗೂ ಮೆಣಸಿನಕಾಯಿಯಲ್ಲಿ ಮದ್ದಿದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ನಿತ್ಯ ಈ ಖಾರದ ಮೆಣಸು ತಿನ್ನುವವರು ಸುದೀರ್ಘ ಜೀವನವನ್ನು ನಡೆಸುತ್ತಾರೆ. ಇವರ ಹೃದಯವೂ ಆರೋಗ್ಯದಿಂದ ಇರುವುದರಿಂದ ದೀರ್ಘ ಕಾಲ ಬದುಕುತ್ತಾರೆ ಎನ್ನಲಾಗಿದೆ.
ಇದರಲ್ಲಿರುವ ಕ್ಯಾಪ್ಸೆಸಿನ್ ಎಂಬ ಅಂಶವು ಖಾರದ ರುಚಿಯನ್ನು ನೀಡುತ್ತದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನೈಸರ್ಗಿಕ ತರಕಾರಿಗಳ ಪಟ್ಟಿಯಲ್ಲಿ ಭದ್ರ ಸ್ಥಾನ ಹೊಂದಿದೆ.