¾ ಕಪ್ – ಆಳವಿ, 1 ಟೇಬಲ್ ಸ್ಪೂನ್ – ತುಪ್ಪ, ¼ ಕಪ್ – ರವೆ, ½ ಕಪ್ – ಬೆಲ್ಲದ ಪುಡಿ, 1 ಟೇಬಲ್ ಸ್ಪೂನ್ – ತೆಂಗಿನಕಾಯಿ ತುರಿ, ¼ ಕಪ್ – ಬಾದಾಮಿ ಚೂರುಗಳು.
ಮಾಡುವ ವಿಧಾನ:
ಆಳವಿ ಬೀಜಗಳನ್ನು ½ ಕಪ್ ನೀರಿನಲ್ಲಿ 3 ಗಂಟೆಗಳ ಕಾಲ ನೆನೆಸಿ ನಂತರ ಇದನ್ನು ಸೋಸಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ನಂತರ ಆಳವಿ ಸೇರಿಸಿ ಇದಕ್ಕೆ ಬೆಲ್ಲ, ರವೆ ಸೇರಿಸಿ 6 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
ಬೆಲ್ಲ ಕರಗಿ ಎಳೆ ಪಾಕ ಬರುತ್ತಿದ್ದಂತೆ ತೆಂಗಿನಕಾಯಿ ತುರಿ ಬಾದಾಮಿ ಚೂರು ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಮಾಡಿ. ನಂತರ ಇದು ತಣ್ಣಗಾದ ಮೇಲೆ ಉಂಡೆ ಕಟ್ಟಿ.