ಮಾಯಿಸ್ಚರೈಸರ್ ಆಗಿ ತುಪ್ಪ ಬಳಸುವುದರಿಂದ ದ್ವಿಗುಣಗೊಳ್ಳುತ್ತೆ ನಿಮ್ಮ ಬ್ಯೂಟಿ

ತುಪ್ಪ ಹಾಕಿ ಅಡುಗೆ ಮಾಡುವುದು ಹೇಗೆ ಎಂಬುದು ನಿಮಗೆಲ್ಲಾ ತಿಳಿದಿದೆ. ಆದರೆ ಅದನ್ನು ಅಂದ ಹೆಚ್ಚಿಸುವ ವಸ್ತುವಾಗಿಯೂ ಬಳಸಬಹುದು.

ತುಪ್ಪ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಲಿಪ್ ಬಾಮ್ ಅಥವಾ ಜೆಲ್ ಗಳಿಗಿಂತ ಉತ್ತಮವಾದುದು. ತುಟಿ ಒಡೆದಾಗ, ಸಿಪ್ಪೆ ಎದ್ದು ಬಂದಾಗ, ಕಳಾಹೀನವಾಗಿದೆ ಎನಿಸಿದಾಗ ಎರಡು ಹನಿ ತುಪ್ಪ ಸವರಿಕೊಳ್ಳಿ, ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡರೆ ಮತ್ತೂ ಒಳ್ಳೆಯದು. ವಾರದೊಳಗೆ ಅದರ ಪರಿಣಾಮವನ್ನು ನೀವು ಕಾಣಬಹುದು.

ಇದು ತುಟಿಗೆ ಮೃದುತ್ವ ಕೊಡುತ್ತದೆ ಮಾತ್ರವಲ್ಲ ನಿಮ್ಮ ಕಾಲಿನ ಹಿಮ್ಮಡಿ ಒಡೆದಿದ್ದರೆ ಅದಕ್ಕೂ ತುಪ್ಪ ಅತ್ಯುತ್ತಮ ಮದ್ದು. ತುಪ್ಪವನ್ನು ಬೆರಳಿನಲ್ಲಿ ತೆಗೆದುಕೊಂಡು ಒಡೆದ ಜಾಗಕ್ಕೆ ನಯವಾಗಿ ಹಚ್ಚಿ. ಎರಡೇ ದಿನದಲ್ಲಿ ಒಡೆದ ಭಾಗ ಸ್ವಚ್ಛವಾಗುತ್ತದೆ.

ದೇಹಕ್ಕೆ ಮಾಯಿಸ್ಚರೈಸರ್ ಆಗಿಯೂ ತುಪ್ಪವನ್ನು ಬಳಸಬಹುದು. ಸ್ನಾನಕ್ಕೆ ಮುಂಚೆ ದೇಹಕ್ಕೆ ತುಪ್ಪದ ಪಸೆ ಸವರಿ ಸ್ನಾನ ಮಾಡುವುದರಿಂದ ನಿಮ್ಮ ತ್ವಚೆ ಮೃದುವಾಗಿಯೇ ಉಳಿಯುತ್ತದೆ. ಒಣ ತ್ವಚೆಯವರು ಇದನ್ನು ಪ್ರಯತ್ನಿಸಿ ನೋಡಿ.

ಮಂಡಿ, ಮೊಣಕೈ ಕಾಲಿನ ಭಾಗ ಕಪ್ಪಾಗಿದ್ದರೆ ಅದಕ್ಕೆ ತುಪ್ಪದೊಂದಿಗೆ ಟೀಟ್ರೀ ಎಣ್ಣೆ ಬೆರೆಸಿ ಹಚ್ಚಿ. ಒಂದು ತಿಂಗಳಲ್ಲಿ ನಿಮ್ಮ ಸಮಸ್ಯೆ ದೂರವಾಗುತ್ತದೆ.

ಮೇಕಪ್ ಹಾಕಿ ಕಾರ್ಯಕ್ರಮ ಮುಗಿಸಿ ಮರಳಿ ಬಂದ ಬಳಿಕ ಅದನ್ನು ಹೇಗೆ ತೆಗೆಯುವುದು ಎಂಬ ಚಿಂತೆಯೂ ಬೇಡ. ತುಪ್ಪವನ್ನು ಮೇಕಪ್ ರಿಮೂವರ್ ಆಗಿಯೂ ಬಳಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read