ಯಾರಾದರೊಬ್ಬ ಮುಖಂಡನ ಅತೀ ಆತ್ಮೀಯ ಅನುಯಾಯಿ ಇದ್ದರೆ ಅವನನ್ನು ಬಲಗೈ ಬಂಟ ಎಂದು ಕರೆಯುವುದಿದೆ.
ಏಕೆಂದರೆ, ಜಗತ್ತಿನಲ್ಲಿ ನಮ್ಮ ಬಲಗೈಗಿರುವಷ್ಟು ಗೌರವ ಮಹತ್ವ ಎಡಗೈಗಿಲ್ಲ. ಆದರೇನು ಮಾಡೋಣ ಹಲವರು ಜನ್ಮ ಸಹಜವಾಗಿ ಬಲಗೈಗಿಂತ ಎಡಗೈ ಹೆಚ್ಚು ಬಲಿಷ್ಠವಾಗಿರುತ್ತದೆ. ಅಂಥವರನ್ನು ಎಡಚ ಎಂದು ಹೀಯಾಳಿಸುವುದಿದೆ.
ಎರಡೂ ಕೈಗಳು ಒಂದೇ ರೀತಿ ಇದ್ದರೂ ಒಂದೇ ರೀತಿ ಕೆಲಸ ಮಾಡಬಲ್ಲವಾಗಿದ್ದರೂ ಬಲಗೈಯ್ಯೇ ಏಕೆ ಶ್ರೇಷ್ಠ ಎಂದು ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲ.
ಆದರೆ, ಜಗತ್ತಿನಲ್ಲಿರುವ ಹಲವು ಎಡಗೈ ವೀರರು ಉನ್ನತ ಹುದ್ದೆಗೆ ಏರಿದ್ದಾರೆ. ಸಾಧನೆ ಮಾಡಿದ್ದಾರೆ. ಆಗಸ್ಟ್ 13 ರಂದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನ ಎಂದು ಆಚರಿಸಲಾಗುತ್ತದೆ.
1976 ರಲ್ಲಿ ಡೆನಾ ಕ್ಯಾಂಪ್ ಬೆಲ್ ಎಂಬುವವರು ಈ ದಿನವನ್ನು ಮೊದಲ ಬಾರಿ ಗುರುತಿಸಿದರು. ಅವರು ಎಡಗೈ ಬಳಕೆದಾರರ ಅಂತಾರಾಷ್ಟ್ರೀಯ ಸಂಘಟನೆಯ ಸಂಸ್ಥಾಪಕರಾಗಿದ್ದಾರೆ. ಎಡಗೈ ಬಳಕೆದಾರರು ಕತ್ತರಿಸುವಾಗ, ಊಟ ಮಾಡುವಾಗ, ಬರೆಯುವಾಗ ಊಟ ಮಾಡುವಾಗ ತೊಂದರೆ ಅನುಭವಿಸುತ್ತಾರೆ.
ಪ್ರಸಿದ್ಧ ಎಡಚರು:
ಬರಾಕ್ ಒಬಾಮಾ, ಬಿಲ್ ಗೇಟ್ಸ್, ಮಾರ್ಕ್ ಜುಕರ್ ಬರ್ಗ್, ಪ್ರಿನ್ಸ್ ವಿಲಿಯಂ, ಎಂಜಲಿನಾ ಜೊಲಿ, ಲೇಡಿ ಗಾಗ್, ಒಫ್ರಾವಿನ್ ಫ್ರೈ, ಅಲ್ಬರ್ಟ್ ಐನ್ ಸ್ಟೀನ್, ಹೆಲೆನ್ ಕೆಲ್ಲರ್, ಲಿಯನಾರ್ಡೋ ಡಾ ವಿನ್ಸಿ, ಅರಿಸ್ಟಾಟಲ್, ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್ ಇವರೆಲ್ಲ ಎಡಗೈ ವೀರರೇ