![](https://kannadadunia.com/wp-content/uploads/2020/07/maxresdefault-31.jpg)
ಸೋರೆಕಾಯಿಂದ ಸಾಂಬಾರು, ಪಲ್ಯ, ಹಲ್ವಾ ಮಾಡಿಕೊಂಡು ಸವಿಯುತ್ತೇವೆ. ಹಾಗೇ ಇದರಿಂದ ರುಚಿಕರವಾದ ದೋಸೆ ಕೂಡ ಮಾಡಬಹುದು ಗೊತ್ತೇ…? ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಬೆಳಗಿನ ತಿಂಡಿಗೆ ತುಂಬಾ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
2 ಕಪ್ – ಅಕ್ಕಿ, ¼ ಕಪ್ – ಉದ್ದಿನಬೇಳೆ, ½ ಕಪ್ ನಷ್ಟು – ಅವಲಕ್ಕಿ, 1 ಚಮಚದಷ್ಟು – ಮೆಂತೆಕಾಳು. 3 ಕಪ್ – ಸೋರೆಕಾಯಿ ಹೋಳು.
ಮಾಡುವ ವಿಧಾನ:
ಅಕ್ಕಿ, ಉದ್ದಿನಬೇಳೆ, ಮೆಂತೆ, ಅವಲಕ್ಕಿಯನ್ನು ಒಂದು ಪಾತ್ರೆಗೆ ಹಾಕಿಕೊಂಡು ಚೆನ್ನಾಗಿ ತೊಳೆದು 5 ಗಂಟೆಗಳ ಕಾಲ ನೆನೆಸಿಡಿ. ನಂತರ ಇದನ್ನು ಗ್ರೈಂಡರ್ ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.
ಹಿಟ್ಟಿಗೆ ಜಾಸ್ತಿ ನೀರು ಸೇರಿಸಬೇಡಿ. ನಂತರ ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಒಳಗಿನ ಬೀಜ ಬಲಿತಿದ್ದರೆ ತೆಗೆದು ಹೋಳುಗಳನ್ನಾಗಿ ಮಾಡಿಕೊಳ್ಳಿ. ಈ ಹೋಳುಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.
ಇದನ್ನು ಈ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯಿಡೀ ಹಾಗೇ ಇಡಿ. ಬೆಳಿಗ್ಗೆ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ದೋಸೆ ತವಾ ಗ್ಯಾಸ್ ಮೇಲೆ ಇಟ್ಟು ಸೆಟ್ ದೋಸಾ ರೀತಿ ಇದನ್ನು ಮಾಡಿಕೊಂಡು ಎರಡು ಕಡೆ ಚೆನ್ನಾಗಿ ಬೇಯಿಸಿದರೆ ರುಚಿಕರವಾದ ಸೋರೆಕಾಯಿ ದೋಸೆ ಸವಿಯಲು ಸಿದ್ಧ.