2 ಕಪ್ ದೋಸೆ ಅಕ್ಕಿ, ½ ಕಪ್ ತೆಂಗಿನಕಾಯಿ ತುರಿ, 1 ಕಪ್-ಅನ್ನ, ¼ ಕಪ್ ಉದ್ದಿನಬೇಳೆ, 1 ಟೀ ಸ್ಪೂನ್-ಮೆಂತೆ, 2 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಅಕ್ಕಿ, ಉದ್ದಿನಬೇಳೆ, ಮೆಂತೆಯನ್ನು ಚೆನ್ನಾಗಿ ತೊಳೆದು 5 ಗಂಟೆಗಳ ಕಾಲ ನೆನೆಸಿಡಿ. ನಂತರ ಗ್ರೈಂಡರ್ ಗೆ ಅನ್ನವನ್ನು ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿ. ಇದು ನಯವಾಗುತ್ತಿದ್ದಂತೆ ಇದಕ್ಕೆ ನೆನೆಸಿದ ಅಕ್ಕಿ, ಉದ್ದಿನಬೇಳೆ, ಮೆಂತೆ ಹಾಕಿ ರುಬ್ಬಿಕೊಳ್ಳಿ. ಹಿಟ್ಟು ನಯವಾಗಿರಲಿ. ಇದನ್ನು ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ.
ದೋಸೆ ಮಾಡುವ ಮೊದಲು ತೆಂಗಿನಕಾಯಿ ತುರಿಯ ಹಾಲು ತೆಗೆದುಕೊಂಡು ಅದನ್ನು ಈ ದೋಸೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಗೇ ಸಕ್ಕರೆ, ಉಪ್ಪು ಕೂಡ ಸೇರಿಸಿ. ದೋಸೆ ಹಿಟ್ಟು ಸ್ವಲ್ಪ ತೆಳುವಾಗಿರಲಿ. ಆಪ್ಪಂ ದೋಸೆ ತವಾ ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಈ ಹಿಟ್ಟನ್ನು ಹಾಕಿ ದೋಸೆ ಮಾಡಿ. ಇದನ್ನು ಬೆಲ್ಲ/ಸಕ್ಕರೆ ಹಾಕಿದ ತೆಂಗಿನಕಾಯಿ ಹಾಲು ಅಥವಾ ಚಟ್ನಿ ಜತೆ ಸವಿದರೆ ಚೆನ್ನಾಗಿರುತ್ತದೆ.