ಸಿಹಿ ಸಿಹಿ ‘ಕಲಾಕಂದ’ ಸವಿದು ನೋಡಿ

ಸಿಹಿ ಎಂದರೆ ಯಾರು ಬೇಡ ಅನ್ನುತ್ತಾರೆ ಹೇಳಿ…? ಮಕ್ಕಳಿಗಂತೂ ಸಿಹಿ ಪದಾರ್ಥಗಳು ತುಂಬಾ ಇಷ್ಟ. ಇನ್ನಂತೂ ಸಾಲುಸಾಲು ಹಬ್ಬಗಳು ಶುರುವಾಗುತ್ತದೆ. ಮನೆಯಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯಿರಿ ಈ ರುಚಿಕರವಾದ ಕಲಾಕಂದ

ಬೇಕಾಗುವ ಸಾಮಗ್ರಿಗಳು:

ತುರಿದ ಪನ್ನೀರ್ – 2 ಕಪ್, ಕಂಡೆನ್ಸಡ್ ಮಿಲ್ಕ್ – 200 ಎಂಎಲ್, ಸಕ್ಕರೆ – 2 ಟೇಬಲ್ ಸ್ಪೂನ್, ಹಾಲಿನ ಪುಡಿ – 1 ಟೇಬಲ್ ಸ್ಪೂನ್, ಏಲಕ್ಕಿ ಪುಡಿ – ಚಿಟಿಕೆ, ಪಿಸ್ತಾ ಚೂರು – 5 ಚಿಕ್ಕದ್ದಾಗಿ ಕತ್ತರಿಸಿದ್ದು.

ಮಾಡುವ ವಿಧಾನ:

ಒಂದು ದೊಡ್ಡ ಬೌಲ್ ಗೆ ಪನ್ನೀರ್, ಕಂಡೆನ್ಸಡ್ ಮಿಲ್ಕ್, ಸಕ್ಕರೆ, ಹಾಲಿನ ಪುಡಿ, ಏಲಕ್ಕಿ ಪುಡಿಯನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ಒಂದು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಚೆನ್ನಾಗಿ ಕೈಯಾಡಿಸುತ್ತಾ ಇರಿ. ಈ ಮಿಶ್ರಣ ತಳಬಿಡುವವರಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಪ್ಲೇಟ್ ಗೆ ತುಪ್ಪ ಸವರಿಟ್ಟುಕೊಳ್ಳಿ.

ತಳ ಬಿಟ್ಟುಕೊಂಡ ಮಿಶ್ರಣವನ್ನು ಈ ಪ್ಲೇಟ್ ಗೆ ಹಾಕಿ ಮೇಲುಗಡೆ ಪಿಸ್ತಾ ಚೂರುಗಳನ್ನು ಉದುರಿಸಿ. ಇದು ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ. ರುಚಿಕರವಾದ ಕಲಾಕಂದ ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read