ಬೇಕಾಗುವ ಪದಾರ್ಥಗಳು : ಕಡಲೆಬೇಳೆ- 1/2 ಕೆ ಜಿ, ಟೊಮಾಟೋ- 6, ಸಾಸಿವೆ- 1ಚಮಚ, ಜೀರಿಗೆ- 1ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಚಕ್ಕೆ-2 ಚಿಕ್ಕ ತುಂಡು, ಲವಂಗ- ಏಲಕ್ಕಿ- ತಲಾ 2, ಒಣ ಮೆಣಸಿನಕಾಯಿ- 6, ಧನಿಯಾ- 2 ಚಮಚ, ತೆಂಗಿನತುರಿ- 1/2 ಕಪ್, ಅನಾನಸ್ ಹೂ- 1, ತುಪ್ಪ- 2 ಚಮಚ, ಕರಿಬೇವು- 2 ಕಡ್ಡಿ.
ಮಾಡುವ ವಿಧಾನ : ಮೊದಲು ಬಾಣಲೆಗೆ 1/2 ಚಮಚ ತುಪ್ಪ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಒಣಮೆಣಸಿನಕಾಯಿ, ಧನಿಯಾ, ತೆಂಗಿನ ತುರಿ, ಅನಾನಸ್ ಹೂ ಹಾಗೂ ಕರಿಬೇವನ್ನು ಹಾಕಿ ಹುರಿದುಕೊಳ್ಳಿ. ಸ್ವಲ್ಪ ತಣಿದ ಬಳಿಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಕಡಲೆ ಬೇಳೆಯನ್ನು ತೊಳೆದು ಅರ್ಧ ಗಂಟೆ ನೆನೆಸಿಡಿ.
ಕುಕ್ಕರಿಗೆ ತುಪ್ಪ ಹಾಕಿ ಬಿಸಿ ಮಾಡಿ ಸಾಸಿವೆ, ಜೀರಿಗೆಯನ್ನು ಹಾಕಿ ಸಿಡಿಸಿ. ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡ ಟೊಮಾಟೊವನ್ನು ಹಾಕಿ ಸ್ವಲ್ಪ ಬಾಡಿಸಿಕೊಳ್ಳಿ. ನೆನೆಸಿಟ್ಟ ಕಡಲೆ ಬೇಳೆಯನ್ನು ಸೇರಿಸಿ ಸ್ವಲ್ಪ ಹೊತ್ತು ಬಾಡಿಸಿ, ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿ ಒಲೆಯಿಂದ ಇಳಿಸಿ. ಈಗ ಗ್ರೇವಿಯನ್ನು ಚಪಾತಿ, ಪೂರಿ, ದೋಸೆ ಜೊತೆ ಸವಿಯಿರಿ.