
ಆಲೂಗಡ್ಡೆ ಇಷ್ಟ ಪಡದವರು ಯಾರೂ ಇಲ್ಲವೇನೋ? ಇದರಿಂದ ಹಲವು ರೀತಿಯ ತಿಂಡಿ, ತಿನಿಸುಗಳನ್ನು ತಯಾರಿಸಬಹುದು. ಆಲೂಗಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುವ ಕಾರಣ ಜೀವಸತ್ವದ ಕೊರತೆಯಿಂದ ಬಳಲುತ್ತಿದ್ದರೆ ಆಲೂಗಡ್ಡೆಯನ್ನು ಸಿಪ್ಪೆ ಸಹಿತ ತಿನ್ನುವುದು ಒಳ್ಳೆಯದು. ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿದ್ದು ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಆಲೂಗಡ್ಡೆಯಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೂ ಜೀರ್ಣಕ್ರೀಯೆ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ.
ಆಲೂಗಡ್ಡೆಯ ವಿಟಮಿನ್ ಬಿ6 ಜೀವಸತ್ವವು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮುಖದ ಸೌಂದರ್ಯವನ್ನೂ ಹೆಚ್ಚಿಸಲು ಆಲೂಗಡ್ಡೆಯ ಫೇಸ್ ಪ್ಯಾಕ್ ಅನ್ನು ಬಳಸಲಾಗುತ್ತದೆ. ಆಲೂ ಮತ್ತು ಅರಿಶಿನ ಫೇಸ್ ಪ್ಯಾಕ್ ನಿಂದ ತ್ವಚೆಯ ಬಣ್ಣವನ್ನು ಹೆಚ್ಚಿಸಬಹುದು.
ಆಲೂಗಡ್ಡೆಯನ್ನು ತುರಿದು ಅದರ ರಸಕ್ಕೆ ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಮುಖಕ್ಕೆ ಹಚ್ಚಬೇಕು. ನಂತರ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. ಈ ರೀತಿ ವಾರದಲ್ಲಿ ಒಂದು ಸಾರಿ ಮಾಡಿ.