ತ್ವಚೆ ಮೃದುವಾಗಲು ಬೆಳಗ್ಗೆ – ರಾತ್ರಿ ಅನುಸರಿಸಿ ಟಿಪ್ಸ್

ನಿಮ್ಮದು ಒಣ ತ್ವಚೆಯೇ, ತುಟಿ ಮುಖದ ಚರ್ಮ ಸದಾ ಒಣಗಿರುತ್ತದೆಯೇ, ಅದನ್ನು ತೆಂಗಿನ ಎಣ್ಣೆಯಿಂದ ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ.

ರಾತ್ರಿ ಮಲಗುವ ವೇಳೆ ಪಾದಗಳಿಗೆ ಚೆನ್ನಾಗಿ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ ಮಲಗಿ. ಇದರಿಂದ ಕ್ರಮೇಣ ನಿಮ್ಮ ಪಾದ ಮೃದುವಾಗುತ್ತದೆ. ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಹೆಬ್ಬೆರಳಿನ ಸಹಾಯದಿಂದ ಮೃದುವಾಗಿ ಅಂಗೈಗೆಲ್ಲಾ ಮಸಾಜ್ ಮಾಡಿ. ಪ್ರತಿ ಬೆರಳಿನ ಸುತ್ತ ಐದು ಬಾರಿ ಮಸಾಜ್ ಮಾಡಿ.

ಪ್ರತಿ ಬೆರಳಿಗೂ ಮಸಾಜ್ ಮಾಡಿದ ಬಳಿಕ ಬೆರಳಿನ ಬುಡದಿಂದ ತುದಿಯವರೆಗೆ ಮತ್ತೆ ಒತ್ತಿ. ನೀವಾಳಿಸಿ ತೆಗೆದಂತೆ ಎಳೆದು ಬಿಡಿ. ಉಗುರಿನ ಬುಡವನ್ನು ಮತ್ತೆ ಮೃದುವಾಗಿ ಒತ್ತಿ. ಇದರಿಂದ ನಿಮ್ಮ ತ್ವಚೆ ಮೃದುವಾಗುತ್ತದೆ. ರಾತ್ರಿ ಹಾಗೂ ಬೆಳಗ್ಗೆ ಇದನ್ನು ಪುನರಾವರ್ತಿಸಿ

ನೀವು ಗರ್ಭ ಧರಿಸಿದ್ದರೆ ಇದನ್ನು ಮಾಡದಿರಿ. ಎರಡು ಮೂರು ದಿನ ಆಹಾರ ಸೇವಿಸದೆ ಇದ್ದರೆ, ಉಪವಾಸ ಮಾಡುತ್ತಿದ್ದರೆ ಈ ಥೆರಪಿ ಮಾಡದಿರಿ. ನಿದ್ರಾಹೀನತೆ ಇದ್ದರೂ ಇದನ್ನು ಮಾಡುವಂತಿಲ್ಲ. ಮದ್ಯಪಾನ, ಧೂಮಪಾನದಿಂದ ಕಡ್ಡಾಯವಾಗಿ ದೂರವಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read