alex Certify ಚರ್ಮ ರೋಗ ನಿವಾರಣೆಗೆ ಬೇಕು ಗಿಜಿಗಿಜಿ ಗಿಡ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮ ರೋಗ ನಿವಾರಣೆಗೆ ಬೇಕು ಗಿಜಿಗಿಜಿ ಗಿಡ…..!

ಸೈಕ್ಲೋಪಿಂಟಿಲಿಡಿನ್ ಕ್ರೋಟಾಲಿಡೀನ್ ಮೊದಲಾದ ಸಂಯುಕ್ತ ರಾಸಾಯನಿಕಗಳಿಂದ ಕೂಡಿರುವ ಗಿಜಿಗಿಜಿ ಕಾಯಿಯ ಎಲೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಮಾತ್ರ ಬಳಕೆಯಾಗುತ್ತದೆ.

ಈ ಸಸ್ಯದ ಸಾಮಾನ್ಯ ಉಪಯೋಗವೆಂದರೆ ಹಸಿರೆಲೆ ಗೊಬ್ಬರಕ್ಕಾಗಿ ತೆಂಗಿನ ತೋಟಗಳಲ್ಲಿ ಬಳಸಲಾಗುತ್ತದೆ. ಕೆಲವು ದೇಶಗಳಲ್ಲಿ ಈ ಗಿಡದ ಹೂವುಗಳನ್ನು ತರಕಾರಿಯಾಗಿ ಬಳಸಲಾಗುತ್ತದೆ. ಈ ಗಿಜಿಗಿಜಿ ಬೀಜಗಳನ್ನು ಅಲ್ಪ ಪ್ರಮಾಣದಲ್ಲಿ ವಿಷಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೂ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಈ ಬೀಜಗಳನ್ನು ತೊಳೆದು ಹುರಿದು ಕಾಫಿ ಪುಡಿಯಾಗಿ ಬಳಸುತ್ತಾರೆ. ಈ ಸಸ್ಯದ ಬೇರನ್ನು ಅರೆದು ಕೀಲು ನೋವಿರುವ ಜಾಗಕ್ಕೆ ಹಚ್ಚಬಹುದು.

ಚರ್ಮರೋಗ ಅಥವಾ ಕಜ್ಜಿಯ ಸಮಸ್ಯೆ ಇರುವವರು ಈ ಗಿಡವನ್ನು ಸಂಪೂರ್ಣವಾಗಿ ಅರೆದು ಬೇವಿನ ಎಣ್ಣೆಯೊಂದಿಗೆ ಮೈಗೆ ಹಚ್ಚಿ ಕೆಲ ಗಂಟೆಗಳ ಬಳಿಕ ಸ್ನಾನ ಮಾಡಬೇಕು. ಈ ಸಸ್ಯದ ಯಾವುದೇ ಅಡ್ಡಪರಿಣಾಮಗಳ ವರದಿಗಳಿಲ್ಲ. ಆದರೂ ವೈದ್ಯರ ಸಲಹೆ ಪಡೆದು ಬಳಸುವುದು ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...