ಅಡುಗೆ ಮನೆಯೆಂದರೆ ಅಲ್ಲಿ ಎಣ್ಣೆ ಜಿಡ್ಡು, ಕಲೆ ಇರುವುದು ಸಾಮಾನ್ಯ. ಕೊಳೆಯಾದ ಅಡುಗೆ ಮನೆ ಕಟ್ಟೆಯನ್ನು ಒರೆಸುವುದಕ್ಕೆ ನಾವು ಬಟ್ಟೆಯನ್ನು ಉಪಯೋಗಿಸುತ್ತೇವೆ. ಆ ಬಟ್ಟೆಗೆ ಎಣ್ಣೆ ಜಿಡ್ಡು, ಅರಿಸಿನ, ಕೊಳಕು ಮೆತ್ತಿಕೊಂಡಿರುತ್ತದೆ. ಎಷ್ಟೇ ಕ್ಲೀನ್ ಮಾಡಿದರೂ ಕೊಳಕು ಸರಿಯಾಗಿ ಹೋಗುವುದಿಲ್ಲ. ಈ ಬಟ್ಟೆಯನ್ನು ಸುಲಭವಾಗಿ ಕ್ಲೀನ್ ಮಾಡುವುದಕ್ಕೆ ಇಲ್ಲಿದೆ ಒಂದು ಸುಲಭವಾದ ಟಿಪ್ಸ್.
ಕೊಳಕಾದ ಅಡುಗೆ ಮನೆಯ ಬಟ್ಟೆಯನ್ನು ಮೊದಲಿಗೆ ಒಂದು ಬಕೆಟ್ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಗ್ಯಾಸ್ ಮೇಲೆ ಒಂದು ಅಗಲವಾದ ಪಾತ್ರೆ ಇಟ್ಟು ಅದಕ್ಕೆ ಬಟ್ಟೆ ಮುಳುಗುವಷ್ಟು ನೀರು ಹಾಕಿ ಅದು ಬಿಸಿಯಾಗುತ್ತಲೆ ಅದಕ್ಕೆ 2 ಚಮಚ ಬೇಕಿಂಗ್ ಸೋಡಾ, 2 ಚಮಚ ವಿನೇಗರ್, ಸ್ವಲ್ಪ ಡಿಟರ್ಜೆಂಟ್ ಹಾಕಿ.
ಈ ನೀರಿಗೆ ಕೊಳಕಾದ ಬಟ್ಟೆಯನ್ನು ಹಾಕಿ 5 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ. 1 ಗಂಟೆಗಳ ಕಾಲ ಹಾಗೆಯೇ ಬಿಟ್ಟು ಬಿಡಿ. ನಂತರ ಇದನ್ನು ಕ್ಲೀನ್ ಮಾಡಿ. ಸುಲಭದಲ್ಲಿ ಇದರಲ್ಲಿನ ಜಿಡ್ಡು, ಕೊಳಕು ಬಿಡುತ್ತದೆ.