ಮಳೆಗಾಲದಲ್ಲಿ ಕೂದಲ ಆರೈಕೆ ಸವಾಲಿನ ಕೆಲಸವೇ ಹೌದು. ಚಿರಿಪಿರಿ ಮಳೆಗೆ ಒದ್ದೆಯಾಗುವ ಕೂದಲನ್ನು ಉದುರದಂತೆ ಎಚ್ಚರದಿಂದ ನೋಡಿಕೊಳ್ಳುವುದೇ ಒಂದು ಕೆಲಸ.
ಮಳೆ ನೀರು ಬಿದ್ದಾಕ್ಷಣ ತಲೆಯನ್ನು ತೊಳೆದು ಒಣಗಿಸಿ. ಇದು ತಲೆಯ ಬುಡವನ್ನು ತುರಿಸುವಂತೆ ಮಾಡುತ್ತದೆ, ತಲೆ ಹೊಟ್ಟು ಸಮಸ್ಯೆಗೂ ಕಾರಣವಾಗುತ್ತದೆ.
ಮಳೆಗಾಲದಲ್ಲಿ ನಿತ್ಯ ತಲೆ ತೊಳೆಯದಿರಿ. ಇದರಿಂದ ಕೂದಲು ಒರಟಾಗುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ವಾರಕ್ಕೆರಡು ಬಾರಿ ತಲೆ ಸ್ನಾನ ಮಾಡಿದರೆ ಸಾಕು.
ಹಿಂದೆ ಬಳಸುತ್ತಿದ್ದ ಶ್ಯಾಂಪೂ ಕಂಡಿಷನರ್ ಬದಲಾಯಿಸದಿರಿ. ಮಳೆಗಾಲದಲ್ಲಿ ಈ ಪ್ರಯೋಗ ಬೇಡ. ಕೂದಲನ್ನು ಫ್ರೀಯಾಗಿ ಬಿಡುವುದು ಒಳ್ಳೆಯದಲ್ಲ. ಜಡೆ ಹಾಕಿ ಬಿಡುವುದು ಉತ್ತಮ.