ವೈನ್ ತಯಾರಿಕೆಗೆ ಬಳಕೆಯಾಗುವ ಕಪ್ಪು ದ್ರಾಕ್ಷಿ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. 100 ಗ್ರಾಂ ದ್ರಾಕ್ಷಿಯಲ್ಲಿ 104 ಕ್ಯಾಲರಿ, 1.9 ಗ್ರಾಂ ಪ್ರೊಟೀನ್, 0.24 ಕೊಬ್ಬು, 1.4 ಗ್ರಾಂ ನಾರಿನಂಶ, 4.8 ಮಿಲಿಗ್ರಾಂ ವಿಟಮಿನ್ ಸಿ, 280 ಮಿಲಿಗ್ರಾಂ ಪೊಟಾಶಿಯಂ ಅಂಶವಿದೆ.
ರಕ್ತದ ಕೊಬ್ಬಿನಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ. ಚರ್ಮಕ್ಕೆ ಸುಕ್ಕು ಬರದಂತೆ ನೋಡಿಕೊಳ್ಳುತ್ತದೆ. ಕಪ್ಪುದ್ರಾಕ್ಷಿಯಿಂದ ಹೊಟ್ಟೆಯ ಬೊಜ್ಜನ್ನು ಸುಲಭವಾಗಿ ಕರಗಿಸಬಹುದು. ಕಪ್ಪುದ್ರಾಕ್ಷಿ ಮೂತ್ರ ಸಂಬಂಧಿ ಸಮಸ್ಯೆಯನ್ನು ತಡೆಗಟ್ಟಿ ಸೋಂಕನ್ನುಂಟು ಮಾಡುವ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡುತ್ತದೆ.
ಒಂದು ಲೋಟ ಕಪ್ಪು ದ್ರಾಕ್ಷಿಯ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸುತ್ತಾ ಬಂದರೆ ರಕ್ತ ಹೆಚ್ಚಾಗುತ್ತದೆ. ಒಣದ್ರಾಕ್ಷಿಯಲ್ಲಿರುವ ಮ್ಯಾನಿಕ್ ಆಸಿಡ್ ಹಲ್ಲುಗಳ ಬಣ್ಣ ಹಾಳಾಗುವುದನ್ನು ನೈಸರ್ಗಿಕವಾಗಿ ತಡೆಗಟ್ಟುತ್ತದೆ.