ಭಾರತೀಯ ಸಹೋದರರ ಡಾನ್ಸ್‌ ನೋಡಿ ಬೆರಗಾದ ಅಮೆರಿಕಾ ಜನ

ರಾಜಸ್ತಾನದ ಸಹೋದರರು ತಮ್ಮ ನೃತ್ಯ ಪ್ರತಿಭೆಯಿಂದ ವಿಶ್ವದಲ್ಲಿ ಮಿಂಚಿದ್ದಾರೆ. ಎನ್.ಬಿ.ಸಿ. ಚಾನಲ್‌ನ ಪ್ರಸಿದ್ಧ ರಿಯಾಲಿಟಿ ಶೋ ʼಅಮೇರಿಕಾಸ್ ಗಾಟ್ ಟ್ಯಾಲೆಂಟ್ʼ ಕಾರ್ಯಕ್ರಮದಲ್ಲಿ ರಾಜಸ್ತಾನದ ಫತೇಪುರದ ಶಾಖಿರ್ ಮತ್ತು ರಿಹಾನ್ ಎಂಬ ಸೋದರರು ನೀಡಿದ ನೃತ್ಯ ಪ್ರದರ್ಶನ ನಿರ್ಣಾಯಕರ ಹಾಗೂ ಜನರ ಮನ ಗೆದ್ದಿದೆ.

ಅಮೇರಿಕಾ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಸಹೋದರರಿಬ್ಬರು ಪ್ರದರ್ಶನ ನೀಡಿದ ವಿಡಿಯೋವನ್ನು ಎರಡು ದಿನದ ಹಿಂದೆ ಯು ಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, 4 ಲಕ್ಷ ಜನರು ವೀಕ್ಷಿಸಿದ್ದಾರೆ.

‌ನಿರ್ಣಾಯಕರಾದ ಸೋಫಿಯಾ ವೆರ್ಗರಾ, ಹ್ಯಾಂಡಿ ಕ್ಲುಂ, ಸಿಮೊನ್ ಕೋವೆಲ್ ಎಂಬುವವರು ಸಹೋದರರ ಪ್ರದರ್ಶನದ ಬಳಿಕ‌ ಎದ್ದು ನಿಂತು‌ ಚಪ್ಪಾಳೆ ತಟ್ಟಿದ್ದಾರೆ. 9 ವರ್ಷದ ರಿಹಾನ್ ತನ್ನ 21 ವರ್ಷದ ಹಿರಿಯ ಅಣ್ಣನ ಜತೆ ಕೋಡ್ ವರ್ಡ್ ಮೂಲಕ ನೃತ್ಯದ ಸ್ಟೆಪ್ ಗಳನ್ನು ಹೊಂದಿಸುತ್ತಾನೆ. ಅವರ ಜಂಪ್ ಗಳು, ಸ್ಕಿಪ್ ಗಳು ನೋಡುಗರ ಪ್ರಶಂಸೆಗೆ ಕಾರಣವಾಗಿವೆ. ವಿಡಿಯೋವನ್ನು 4.3 ಲಕ್ಷ ಜನ ನೋಡಿದ್ದು, 17000 ಜನ‌ ಲೈಕ್ ಮಾಡಿದ್ದಾರೆ.

https://www.youtube.com/watch?time_continue=2&v=_jVza-z2Lj8&feature=emb_logo

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read