ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ, ಹೆಚ್ಚು ಹೊತ್ತು ವಾಹನ ಚಾಲನೆ ಮಾಡುವುದರಿಂದ ಸಣ್ಣ ಪ್ರಾಯದಲ್ಲೇ ಮೊಣಕಾಲಿನ ಮೇಲೆ ಒತ್ತಡ ಬಿದ್ದು ಕೀಲು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರಗಳನ್ನು ನೋಡೋಣ.
ಶರೀರದಲ್ಲಿ ಮಿನರಲ್ಸ್ ಕಡಿಮೆ ಆಗುವುದರಿಂದ ಇಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಬೆಳ್ಳುಳ್ಳಿಯಲ್ಲಿ ಆಂಟಿ ಇಂಫ್ಲೋಮೆಟರಿ ಇರುತ್ತದೆ ಇದು ಸುಲಭವಾಗಿ ಕೀಲು ನೋವನ್ನು ಹೋಗಲಾಡಿಸುತ್ತದೆ.
ಎರಡು ಲೋಟ ನೀರಿಗೆ ಅರ್ಧ ಚಮಚ ಅರಿಷಿಣ ಮತ್ತು ಅರ್ಧ ಚಮಚ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ 8 ರಿಂದ 9 ನಿಮಿಷ ಬಿಸಿ ಮಾಡಿ. ಇದಕ್ಕೆ ಜೇನುತುಪ್ಪ ಬೆರೆಸಿ. ಜೇನುತುಪ್ಪದಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಗಳಿವೆ. ಈ ಮಿಶ್ರಣವನ್ನು ನಿತ್ಯ ಸೇವಿಸಿ.
10 ಬೆಳ್ಳುಳ್ಳಿ ಬೀಜಗಳನ್ನು ಬೇಯಿಸಿ ಬಳಿಕ ನೀರಿಗೆ ಬೆರೆಸಿ ಕುಡಿಯುವುದರಿಂದ ಕೀಲುನೋವಿನಿಂದ ಮುಕ್ತಿ ಪಡೆಯಬಹುದು.
ಬೆಳ್ಳುಳ್ಳಿ ಬೀಜಗಳನ್ನು ಎಣ್ಣೆಯಲ್ಲಿ ಹುರಿದು ಕೀಲುನೋವು ಇರುವ ಜಾಗದಲ್ಲಿ ಹಚ್ಚುವುದರಿಂದ ನೋವು ಕಡಿಮೆ ಆಗುತ್ತದೆ.