ಇನ್ಮೇಲೆ ಮಾವಿನಹಣ್ಣಿನ ಸೀಸನ್. ವಿವಿಧ ಬಗೆಯ ಮಾವಿನ ಹಣ್ಣಿನ ಖಾದ್ಯಗಳನ್ನು ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಸುಲಭವಾಗಿ ಮಾಡಿಕೊಂಡು ಸವಿಯುವ ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಮಾವಿನ ಕಾಯಿ ಹಣ್ಣು-4, 10 ಎಸಳು ಕರಿಬೇವು, ¾ ಚಮಚ-ಮೆಂತೆ, ಸಾಸಿವೆ-3 ಚಮಚ, ಕಡಲೆಬೇಳೆ-2 ಚಮಚ, ಜೀರಿಗೆ-1 ಚಮಚ, ಕೊತ್ತಂಬರಿ-1 ಚಮಚ, ಉದ್ದಿನಬೇಳೆ-1 ಚಮಚ, 1 ಕಪ್ ತೆಂಗಿನಕಾಯಿ ತುರಿ, ಸ್ವಲ್ಪ ಬೆಲ್ಲ, ಮೆಣಸು-6, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ-2 ಚಮಚ.
ಮಾಡುವ ವಿಧಾನ:
ಒಂದು ಪಾತ್ರೆಗೆ ಮಾವಿನಹಣ್ಣು 2 ನೀರು, ಉಪ್ಪು, ಬೆಲ್ಲ ಹಾಕಿ ಗ್ಯಾಸ್ ಮೇಲೆ ಇಟ್ಟು 10 ನಿಮಿಷಗಳ ಕಾಲ ಬೇಯಿಸಿ. ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಮೆಣಸು, ಕಡಲೆಬೇಳೆ, ಉದ್ದಿನಬೇಳೆ, ಮೆಂತೆ, ಸಾಸಿವೆ, ಕರಿಬೇವು, ಕೊತ್ತಂಬರಿ, ಜೀರಿಗೆ ಹಾಕಿ ಫ್ರೈ ಮಾಡಿಕೊಳ್ಳಿ. ಇದು ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಕಾಯಿ ಹಾಕಿ ರುಬ್ಬಿಕೊಳ್ಳಿ.
ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ 1 ಟೀ ಸ್ಪೂನ್ ಸಾಸಿವೆ ಹಾಕಿ ಅದು ಚಟಪಟ ಎಂದಾಗ ಉದ್ದಿನಬೇಳೆ ಹಾಕಿ ಚಿಟಿಕೆ ಇಂಗು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ರುಬ್ಬಿದ ಮಸಾಲೆ ಹಾಕಿ 5 ನಿಮಿಷಗಳ ಕಾಲ ಕೈಯಾಡಿಸಿ. ನೀರು ಬೇಕಿದ್ದರೆ ಸೇರಿಸಿಕೊಂಡು ಉಪ್ಪು ಹಾಕಿ ಬೇಯಿಸಿಟ್ಟುಕೊಂಡ ಮಾವಿನಹಣ್ಣು ಹಾಕಿ ಕುದಿಸಿಕೊಳ್ಳಿ.