HomeBeautyಹೀಗೆ ನಿಂಬೆ ಬಳಸಿ, ನಿಮ್ಮ ತ್ವಚೆ ನುಣುಪಾಗಿಸಿ

ಹೀಗೆ ನಿಂಬೆ ಬಳಸಿ, ನಿಮ್ಮ ತ್ವಚೆ ನುಣುಪಾಗಿಸಿ

ನಿಂಬೆಗೆ ನಿಮ್ಮ ತ್ವಚೆಯ ಅಂದ ಹೆಚ್ಚಿಸುವ ಗುಣವಿದೆ. ಅದು ಹೇಗೆ ಎಂದಿರಾ…?

ಟೊಮೆಟೋ ರಸಕ್ಕೆ ನಿಂಬೆಹಣ್ಣಿನ ರಸ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಣ್ಣಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಈ ಮಿಶ್ರಣವು ನಿಮ್ಮ ಮುಖದ ಎಣ್ಣೆಯನ್ನು ಕಡಿಮೆ ಮಾಡುವುದರ ಜೊತೆಗೆ ಗುಳ್ಳೆಗಳನ್ನು ಕೂಡ ನಿವಾರಿಸುತ್ತದೆ. ಚಿಕ್ಕ ಚಿಕ್ಕ ರಂಧ್ರಗಳನ್ನು ತೆಗೆದು ಸುಕ್ಕಾದ ತ್ವಚೆಯನ್ನು ಸರಿಪಡಿಸುತ್ತದೆ.

ನಿಂಬೆರಸಕ್ಕೆ ಒಂದು ಲೋಟ ಗುಲಾಬಿ ನೀರು ಮತ್ತು ಅರ್ಧ ಲೋಟ ಸೌತೆಕಾಯಿ ರಸವನ್ನು ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿ ಮುಖ ತೊಳೆದು ಈ ಮಿಶ್ರಣವನ್ನು ಮುಖದ ಎಲ್ಲ ಭಾಗಕ್ಕೆ ಚಿಮುಕಿಸಿಕೊಳ್ಳಿ. 15 ನಿಮಿಷ ಹಾಗೆ ಒಣಗಲು ಬಿಡಿ. ಬಳಿಕ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular