ಭಗವಂತ ವಿಷ್ಣುವಿಗೆ ಮುಡಿಪಾಗಿರುವ ಪದ್ಮನಾಭಸ್ವಾಮಿ ದೇವಾಲಯ ಕೇರಳದ ತಿರುವನಂತಪುರದಲ್ಲಿದೆ.
ತಿರುವಾಂಕೂರು ಜಿಲ್ಲೆಯ ರಾಜಮನೆತನ ಇಂದಿಗೂ ಈ ದೇವಸ್ಥಾನದ ಒಡೆತನ ಹೊಂದಿದೆ. ಈ ದೇವಾಲಯ ವಿಷ್ಣುವನ್ನು ಆರಾಧಿಸುವ ಪ್ರಮುಖ ಕೇಂದ್ರ. ಈ ದೇವಾಲಯದಲ್ಲಿ ಬಳಸಲಾಗಿರುವ ದಿವ್ಯ ಪ್ರಬಂಧ ಅಥವಾ ಸುಮಾರು ಆರರಿಂದ ಒಂಭತ್ತನೆಯ ಶತಮಾನದಲ್ಲಿ ತಮಿಳು ಆಳ್ವಾರ್ ಸಂತರು ಬರೆದಿರುವ ಪ್ರಾಚೀನ ತಮಿಳು ಲಿಪಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ.
ಕೇರಳದ ರಾಜಧಾನಿ ತಿರುವನಂತಪುರ ನಗರದ ಕೇಂದ್ರ ಭಾಗದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯ, ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪೈಕಿ ಮಂಚೂಣಿಯಲ್ಲಿದೆ. ಭಾರತದಲ್ಲಿ ನೋಡಲೇಬೇಕಾದ ಶ್ರೀಮಂತ, ಪ್ರಸಿದ್ಧ ದೇವಸ್ಥಾನಗಳ ಪೈಕಿ ವಿಷ್ಣು ದೇವರಿಗೆ ಮುಡಿಪಾದ ಈ ದೇವಾಲಯವೂ ಒಂದು.
ಪದ್ಮನಾಭ ಸ್ವಾಮಿ ದೇವಾಲಯವು 12 ಸಾವಿರ ಸಾಲಿಗ್ರಾಮಗಳಿಂದ ಮಾಡಲ್ಪಟ್ಟಿದೆ. ಇಲ್ಲಿ 90 ಸಾವಿರ ಕೋಟಿ ಬೆಲೆಬಾಳುವ ಚಿನ್ನದ ವಿಗ್ರಹ, ಬಂಗಾರ, ಪ್ರಾಚೀನ ಬೆಳ್ಳಿ, ವಜ್ರ ವೈಢೂರ್ಯಗಳು, ಮುತ್ತು ರತ್ನದ ಹರಳುಗಳು ಇವೆ. ಇಲ್ಲಿ ಎರಡು ಚಿನ್ನದ ತೆಂಗಿನ ಕಾಯಿಗಳಿದ್ದು, ಅದರಲ್ಲಿ ಬೆಲೆಬಾಳುವ ಹರಳುಗಳಿವೆ.