ದೇಹದಲ್ಲಿರುವ ಅನಗತ್ಯ ಕೂದಲನ್ನು ಹೇಗೆ ತೆಗೆಯುವುದು ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇಲ್ಲಿದೆ ಕೆಲವು ಟಿಪ್ಸ್.
ನೀವು ಮನೆಯಲ್ಲಿ ವ್ಯಾಕ್ಸ್ ಪಟ್ಟಿಗಳನ್ನು ಹೊಂದಿದ್ದರೆ, ಅವುಗಳನ್ನು ನಿಮ್ಮ ಮುಖಕ್ಕಾಗಿ ಬಳಸಬಹುದು. ನೀವು ವ್ಯಾಕ್ಸ್ ಪಟ್ಟಿಗಳನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ನಿಮ್ಮ ಮುಖದ ಕೂದಲನ್ನು ತೆಗೆಯಲು ಬಳಸಿ.
ವ್ಯಾಕ್ಸ್ ಪಟ್ಟಿ ಇಲ್ಲವಾದರೆ ಮನೆಯಲ್ಲೇ ಇದನ್ನು ತಯಾರಿಸಬಹುದು. ಸ್ವಲ್ಪ ನೀರು, ನಿಂಬೆ ರಸ ಮತ್ತು ಸಕ್ಕರೆ ಬೆರೆಸಿ ವ್ಯಾಕ್ಸ್ ತಯಾರಿಸಿ.
ನೀವು ಮನೆಯಲ್ಲಿ ಫೇಸ್ ರೇಜರ್ಗಳನ್ನು ಹೊಂದಿದ್ದರೆ, ಅದರಲ್ಲೇ ಮುಖದ ಕೂದಲನ್ನು ತೆಗೆಯಿರಿ. ಆದರೆ ಬಳಸುವ ವೇಳೆ ಎಚ್ಚರವಿರಲಿ…!
ಥ್ರೆಡ್ ಮಾಡುವುದು ಹೇಗೆ ಎಂಬುದನ್ನು ಕಲಿಯಿರಿ. ಇದು ತುಂಬಾ ಸರಳವಾಗಿದ್ದು, ಗಲ್ಲದ ಮತ್ತು ಮೇಲಿನ ತುಟಿಗಳ ಮೇಲಿನ ಕೂದಲನ್ನು ಇದೇ ರೀತಿ ತೆಗೆಯಬಹುದು. ಇದು ಪೂರ್ಣ ಬೆಳೆಯುವ ಮೊದಲೇ ತೆಗೆದರೆ ಹೆಚ್ಚು ನೋವನ್ನು ತಪ್ಪಿಸಬಹುದು.