ಬೆಣ್ಣೆಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದರ ಸ್ಮೂಥಿ ಮಾಡಿಕೊಂಡು ಸೇವಿಸುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಬೇಗನೆ ಮಾಡಿಕೊಂಡು ಸವಿಯಬಹುದು.
ಬೇಕಾಗುವ ಸಾಮಾಗ್ರಿಗಳು:
1 ಬೆಣ್ಣೆ ಹಣ್ಣು, ½ ಬಾಳೆ ಹಣ್ಣು, 3 ಟೇಬಲ್ ಸ್ಪೂನ್-ಜೇನುತುಪ್ಪ, 1 ಕಪ್- ಮಿಲ್ಕ್, 1 ಟೇಬಲ್ ಸ್ಪೂನ್-ಡ್ರೈ ಫ್ರೂಟ್ಸ್, 1 ಟೀ ಸ್ಪೂನ್-ಜೇನುತುಪ್ಪ.
ಮಾಡುವ ವಿಧಾನ:
ಮೊದಲಿಗೆ ಒಂದು ಬೆಣ್ಣೆ ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಒಳಗಿನ ಬೀಜ ತೆಗೆದು ತಿರುಳನ್ನು ಮಿಕ್ಸಿ ಜಾರಿಗೆ ಹಾಕಿ. ನಂತರ ಅದಕ್ಕೆ ½ ಬಾಳೆಹಣ್ಣು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಹಾಗೇ ಇದಕ್ಕೆ ಜೇನುತುಪ್ಪ, ತಣ್ಣಗಿನ ಹಾಲು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
ಹಾಲು ಬೇಕಿದ್ದರೆ ಸೇರಿಸಿಕೊಳ್ಳಿ. ನಂತರ ಇದನ್ನು ಒಂದು ಗ್ಲಾಸ್ ಗೆ ಹಾಕಿ ಮೇಲುಗಡೆ ಡ್ರೈ ಫ್ರೂಟ್ಸ್ ಸೇರಿಸಿ. 1 ಟೀ ಸ್ಪೂನ್ ಜೇನುತುಪ್ಪ ವನ್ನು ಮೇಲೆ ಹಾಕಿ ಸರ್ವ್ ಮಾಡಿ.