ದೀರ್ಘ ಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ, ಪ್ರಮುಖವಾಗಿ ಸಂದಿವಾತದಂತಹ ಸಮಸ್ಯೆಗಳಿಗೆ ಉಪವಾಸ ಮಾಡುವುದು ಅತ್ಯುತ್ತಮ ಚಿಕಿತ್ಸೆ.
ಉಪವಾಸ ಮಾಡುವುದು ಎಂದರೆ ಕ್ಯಾಲೊರಿಗಳಿಗೆ ಕಡಿವಾಣ ಹಾಕುವುದು. ಇದರಿಂದ ಅಧಿಕ ರಕ್ತದೊತ್ತಡ, ಚಯಾಪಚಯ ಸಮಸ್ಯೆಗಳು, ಉರಿಯೂತದ ಕಾಯಿಲೆಗಳು, ಮಾನಸಿಕ ಅಸ್ವಸ್ಥತೆಗಳು ಮತ್ತು ಅಟೊಪಿಕ್ ಸಮಸ್ಯೆಗಳಿಗೆ ವೈದ್ಯಕೀಯ ಪ್ರಯೋಜನ ಸಿಗುತ್ತದೆ.
ಭಾರತದಲ್ಲಿ ಶೇ.61 ರಷ್ಟು ಸಾವುಗಳು ಸಾಂಕ್ರಾಮಿಕವಲ್ಲದ ಆರೋಗ್ಯ ಸಮಸ್ಯೆಗಳಿಂದ ಸಂಭವಿಸುತ್ತಿದ್ದು, ಈ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಉಪವಾಸವೇ ದಿವ್ಯೌಷಧ.
ನಿರ್ದಿಷ್ಟ ಅವಧಿಯವರೆಗೆ ಆಹಾರ, ನಿಕೋಟಿನ್ ಮತ್ತು ಕೆಫೀನ್ ನಂತಹ ಅಂಶಗಳನ್ನು ಸೇವಿಸದೇ ಇರುವುದೇ ಉಪವಾಸ. ಇದನ್ನು ಕ್ರಮಬದ್ಧವಾಗಿ ಆಚರಿಸಿದರೆ ಹೊಸ ಚೈತನ್ಯ ಮೂಡುತ್ತದೆ. ಮಾತ್ರವಲ್ಲ ದೇಹ ರಿಫ್ರೆಶ್ ಆಗುತ್ತದೆ.
ಉಪವಾಸದ ಅವಧಿಯಲ್ಲಿ ತಾಜಾ ಹಣ್ಣಿನ ಜ್ಯೂಸ್, ನಿಂಬೆ ಹಣ್ಣಿನ ರಸ, ಜೇನುತುಪ್ಪ, ವೆಜಿಟೆಬಲ್ ಸೂಪ್ ಗಳನ್ನು ಸೇವಿಸುವ ಮೂಲಕ ದಿನವೊಂದಕ್ಕೆ ಗರಿಷ್ಠ 300 ಕ್ಯಾಲರಿ ಮಾತ್ರ ಸೇವಿಸಿ.
ಇದರಿಂದ ಪಿತ್ತಜನಕಾಂಗ, ಮೂತ್ರಪಿಂಡಗಳು, ಕರುಳು, ಚರ್ಮ ಮತ್ತು ಶ್ವಾಸಕೋಶಗಳು ಸ್ವಾಸ್ಥ್ಯವಾಗಿರುತ್ತವೆ. ಉಪವಾಸದ ಅವಧಿಯಲ್ಲಿ ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳುವುದು ಬಹಳ ಮುಖ್ಯ.