ಮಕ್ಕಳು ಬೆರಳು ಚೀಪುವುದು ಸ್ವಾಭಾವಿಕ ಕ್ರಿಯೆ. ಆದರೆ ಅದು 5-6 ವರ್ಷದ ಬಳಿಕವೂ ಮುಂದುವರೆದರೆ ಸಮಸ್ಯೆಗಳು ಕಾಣಿಸಿಕೊಂಡಾವು.
ಬೆರಳು ಚೀಪುವ ಅಭ್ಯಾಸವು ಮಗುವಿಗೆ ಗರ್ಭಾವಸ್ಥೆಯಲ್ಲೇ ಕಾಣಿಸಿಕೊಳ್ಳುತ್ತದೆ ಮತ್ತು ಶೇ.46 ರಷ್ಟು ಮಕ್ಕಳಲ್ಲಿ ಅದು ಮುಂದುವರಿಯುತ್ತದೆ. ಇದು ಮಗುವಿಗೆ ನೆಮ್ಮದಿ ಹಾಗೂ ಸುರಕ್ಷಿತ ಭಾವವನ್ನು ನೀಡುತ್ತದೆ.
ಎರಡು ವರ್ಷದ ಬಳಿಕ ವಿಪರೀತ ಸುಸ್ತಾಗಿದ್ದಾಗ, ಅನಾರೋಗ್ಯವಿದ್ದಾಗ, ನಿದ್ದೆ ಮಾಡುವಾಗ ಮಾತ್ರ ಕಾಣಿಸಿಕೊಳ್ಳುತ್ತದೆ.
ನಾಲ್ಕನೇಯ ವಯಸ್ಸಿನ ಬಳಿಕ ಇದು ಸಂಪೂರ್ಣ ಇಲ್ಲವಾಗಿ ಆಕರ್ಷಣೆ ಕಡಿಮೆಯಾಗುತ್ತದೆ. ಆ ಬಳಿಕವೂ ಮುಂದುವರಿದರೆ ಹಲ್ಲುಬ್ಬು ಸಮಸ್ಯೆ ಕಾಡಬಹುದು.
ಮೇಲ್ದವಡೆಯ ಬೆಳವಣಿಗೆ ಕುಂಠಿತಗೊಂಡೀತು. ಗೆಳಯರಿಂದ ಅಪಹಾಸ್ಯಕ್ಕೆ ಒಳಗಾಗಬಹುದು. ಹೀಗಾಗಿ ಬೆರಳು ಚೀಪುವಿಕೆಯ ಹಂತಗಳನ್ನು ಗುರುತಿಸಿಕೊಳ್ಳಿ.