ಮಗುವಾದ ಬಳಿಕ ಏರಿಕೆಯಾದ ತೂಕ ಇಳಿಸಲು ಇಲ್ಲಿದೆ ಟಿಪ್ಸ್

ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯ ದೇಹದಲ್ಲಿ ಮಹತ್ತರ ಬದಲಾವಣೆಗಳು ಆಗುವುದು ಸಾಮಾನ್ಯ. ನಿದ್ದೆಗೆಡುವ ರಾತ್ರಿಗಳು, ಮಗುವಿನ ಆರೈಕೆ, ಹೊಟ್ಟೆಯಲ್ಲಿ ನೆರಿಗೆ, ದೇಹ ತೂಕ ಹೆಚ್ಚಾಗುವುದು ಅತಿ ಸಹಜವೂ ಆಗಿರುತ್ತದೆ. ತೂಕ ಹೆಚ್ಚುವುದರಿಂದ ಮಾನಸಿಕ ಖಿನ್ನತೆಯೂ ಹೆಚ್ಚಬಹುದು.‌

ಮಗುವಿಗೆ ಹಾಲುಣಿಸುವ ತಾಯಂದಿರು ನೆನಪಿಟ್ಟುಕೊಳ್ಳಬೇಕಾದ್ದೆಂದರೆ ತೂಕ ಇಳಿಸುವ ಪ್ರಯತ್ನದಲ್ಲಿ ಮಗುವಿಗೆ ಹಾಲು ಕಡಿಮೆಯಾಗಬಾರದು. ಒಂದೇ ಬಾರಿ ಹೆಚ್ಚು ಊಟ ಮಾಡುವ ಬದಲು ಪದೇ ಪದೇ ಸ್ವಲ್ಪ ಸ್ವಲ್ಪವೇ ತಿನ್ನುತ್ತಿರಿ. ಎರಡು ಗಂಟೆಗೊಮ್ಮೆ ತಿನ್ನುತ್ತಿದ್ದರೆ ಜೀರ್ಣಕ್ರಿಯೆ ಉತ್ತಮವಾಗಿ ಕೊಬ್ಬಿನ ಅಂಶವೂ ಕಡಿಮೆಯಾಗುತ್ತದೆ.

ಪ್ರೊಟೀನ್ ಹೇರಳವಾಗಿರುವ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಸಾಕಷ್ಟು ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮಗೊಂಡು ಅನಗತ್ಯ ಕೊಬ್ಬು ದೇಹದಿಂದ ಹೊರ ಹೋಗುತ್ತದೆ. ನಾರು ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದಲೂ ದೇಹ ತೂಕ ಕಡಿಮೆ ಮಾಡಬಹುದು. ಬೆಳಗಿನ ಉಪಹಾರ ಬಿಡದಿರಿ. ಜಂಕ್ ಫುಡ್ ನಿಂದ ದೂರವಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read