ವಯಸ್ಸು 40 ಸಮೀಪಿಸುತ್ತಿದ್ದಂತೆ ತ್ವಚೆಯ ಹೊಳಪು ಕಡಿಮೆಯಾಗುತ್ತದೆ. ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ನಿಮ್ಮ ತ್ವಚೆಯನ್ನು ಆಕರ್ಷಕವಾಗಿಸಬಹುದು.
ಮೊದಲಿಗೆ ಬಾಳೆಹಣ್ಣನ್ನು ಕೈಯಿಂದ ಹಿಸುಕಿ ಪೇಸ್ಟ್ ಮಾಡಿ ಅದಕ್ಕೆ 1 ಚಮಚ ಹಸಿ ಹಾಲು ಹಾಕಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ.
ಮರುದಿನ ಅರ್ಧ ಗ್ಲಾಸ್ ಅಕ್ಕಿಯನ್ನು ನೀರಿಗೆ ನೆನೆ ಹಾಕಿ ಅರ್ಧ ಗಂಟೆಯ ಬಳಿಕ ಆ ನೀರಿನಿಂದ ಮುಖ ತೊಳೆಯಿರಿ, ಅದು ಮುಖದಲ್ಲಿ ಹಾಗೇ ಒಣಗಲಿ. ಅರ್ಧ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಮೂರನೆಯ ದಿನ ಒಂದು ಆಲೂಗಡ್ಡೆಯ ಸಿಪ್ಪೆ ತೆಗೆದು ತುರಿದು, ದಾಳಿಂಬೆಯ ಬೀಜಗಳನ್ನು ಗ್ರೈಂಡ್ ಮಾಡಿ, ನಿಂಬೆರಸ ಬೆರೆಸಿ. ಫ್ರೀಜರ್ನಲ್ಲಿ ಇಟ್ಟು ಕ್ಯೂಬ್ ತಯಾರಿಸಿ. ಪ್ರತಿದಿನ 5 ನಿಮಿಷ ಮಸಾಜ್ ಮಾಡಿ, ನಂತರ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಇದರಿಂದ ನಿಮ್ಮ ಮುಖ ಹೊಳೆಯುವುದು ಖಚಿತ.