alex Certify ಜೀರ್ಣಕ್ರಿಯೆ ಉತ್ತಮಗೊಳಿಸುತ್ತೆ ʼಕ್ಯಾಪ್ಸಿಕಂʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀರ್ಣಕ್ರಿಯೆ ಉತ್ತಮಗೊಳಿಸುತ್ತೆ ʼಕ್ಯಾಪ್ಸಿಕಂʼ

ಕ್ಯಾಪ್ಸಿಕಂನಿಂದ ಬೋಂಡಾ, ಕರಿ ತಯಾರಿಸಬಹುದು ಎಂದು ಸರಳವಾಗಿ ಹೇಳುತ್ತೇವೆ. ಆದರೆ ಅದರಿಂದ ದೇಹದ ಮೇಲಾಗುವ, ಆರೋಗ್ಯದ ಪ್ರಯೋಜನಗಳ ಬಗ್ಗೆ ನಮಗೆ ತಿಳಿದಿಲ್ಲ.

ಹೃದಯದ ಆರೋಗ್ಯಕ್ಕೆ ಅಗತ್ಯವಿರುವ ಲೈಕೋಪಿನ್ ಎಂಬ ಹೋರಾಡುವ ಗುಣವುಳ್ಳ ಪೋಷಕಾಂಶ ಕ್ಯಾಪ್ಸಿಕಮ್ನಲ್ಲಿದೆ. ವಿಟಮಿನ್ ಬಿ6 ಇದರಲ್ಲಿದ್ದು, ದೇಹದಲ್ಲಿರುವ ಹೋಮೋಸಿಸ್ಟೈನ್ ಮಟ್ಟವನ್ನು ತಗ್ಗಿಸುತ್ತದೆ. ಇದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ.

ತೂಕ ಇಳಿಸುವವರ ಪಟ್ಟಿಯಲ್ಲಿ ನೀವಿದ್ದರೆ ಕ್ಯಾಪ್ಸಿಕಮ್ ಸೇವಿಸಿ. ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಜೀರ್ಣಕ್ರಿಯೆಯನ್ನು ಕೂಡ ಉತ್ತಮಗೊಳಿಸುತ್ತದೆ.

ನೋವು ನಿವಾರಕವಾಗಿಯೂ ಕೆಲಸ ಮಾಡುವ ಇದು ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇದರಲ್ಲಿ ದಿನದ ಆವಶ್ಯಕತೆಗೆ ಬೇಕಾಗಿರುವುದಕ್ಕಿಂತಲೂ 3 ಪಟ್ಟು ಹೆಚ್ಚು ಪ್ರಮಾಣದ ವಿಟಮಿನ್ ಸಿ ಇದೆ. ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯನ್ನೂ ಕೆಂಪು ಕ್ಯಾಪ್ಸಿಕಮ್ ನಿವಾರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...