ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ, ಚಹಾ ಸೇವಿಸುವುದು ಕೆಲವರ ಖಯಾಲಿ. ಇದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಮುಂಜಾನೆ ಎದ್ದಾಕ್ಷಣ ಟೀ ಕುಡಿದರೆ ಹೊಟ್ಟೆಯಲ್ಲಿರುವ ರಾಸಾಯನಿಕ ಹಾಗೂ ಆಮ್ಲಗಳಲ್ಲಿ ಏರುಪೇರಾಗುತ್ತದೆ. ನಿರಂತರವಾಗಿ ಹೀಗೆ ಮಾಡುವುದರಿಂದ ಆಸಿಡಿಟಿ ಸಮಸ್ಯೆ ನಿಮ್ಮನ್ನು ಕಾಡಬಹುದು.
ಮುಂಜಾನೆ ಟೀ ಕುಡಿಯುವುದರಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುತ್ತದೆ ವಿಜ್ಞಾನ. ಟೀ ನಲ್ಲಿರುವ ಥಿಯೋಫಿಲಿನ್ ಹೆಸರಿನ ಅಂಶ ಇದು ಮಲವನ್ನು ಗಟ್ಟಿ ಮಾಡುತ್ತದೆ.
ಮುಂಜಾನೆ ಟೀ ಕುಡಿಯುವುದರಿಂದ ದೇಹ ಇತರ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.
ಟೀ ನಲ್ಲಿ ನಿಕೋಟಿನ್ ಮಾದರಿಯ ಅಂಶಗಳು ಇರುತ್ತವೆ. ಇದು ಅಡಿಕ್ಷನ್ಗೆ ಕಾರಣವಾಗಬಹುದು. ಹಾಗಾಗಿ ಟೀ – ಕಾಫಿಗೆ ಅಡಿಕ್ಟ್ ಆಗದೆ ಆರಾಮವಾಗಿರಿ.